ಆರು ವರ್ಷವಾದ್ರು ನಿವೇಶನ ಸಿಗದೆ ಸ್ಥಳೀಯರ ಪರದಾಟ

ಶನಿವಾರ, 25 ಫೆಬ್ರವರಿ 2023 (18:43 IST)
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಕೊಳಗೇರಿ ನಿವಾಸಿಗಳಿಗೆ ನಿರ್ಮಾಣ ಮಾಡಿದ್ದ ಮನೆಗಳನ್ನ, ಕಾಮಗಾರಿ ಮುಕ್ತಾಯಕ್ಕೂ ಮುನ್ನವೇ ಉದ್ಘಾಟನೆ ವರ್ಷ ಕಳೆದರೂ ಕಾಮಗಾರಿ ಮುಕ್ತಾಯ ಮಾಡದೇ ಬಡ ಸ್ಲಂ ನಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ಬಂದಿದ್ದು, ಸರ್ಕಾರದ ಮನೆ ನಂಬಿದ್ದ ನಿವಾಸಿಗಳು ಅತ್ತ ಮನೆಯೂ ಇಲ್ಲದೆ, ಇತ್ತ ಜಾಗವು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾರ್ವತಿಪುರದ ಕೊಳಚೆ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ವಸತಿ ಇಲಾಖೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ನಿರ್ಮಾಣ ಮಾಡಿರುವ ಮನೆಗಳನ್ನ ಕಾಮಗಾರಿ ಮುಕ್ತಾಯಕ್ಕೂ ಮುನ್ನವೇ ಉದ್ಘಾಟನೆ ಮಾಡಿದ್ದು, ಉದ್ಘಾಟನೆಯಾಗಿ ವರ್ಷವೇ ಕಳೆದ್ರು ಬಡವರ ಕೈ ಮನೆ ಹಸ್ತಾಂತರವಾಗಿಲ್ಲ.

ಕಾಮಗಾರಿ ಮುಕ್ತಾಯಕ್ಕೂ ಮುನ್ನವೇ ಸ್ಥಳೀಯ ಶಾಸಕ ಉದಯ ಗರುಡಚಾರ್ ವಸತಿ ಸಚಿವ ವಿ ಸೋಮಣ್ಣ ಕಳೆದ ೨೦೨೨ರ ಏಪ್ರಿಲ್ ನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ೪೦ ಕ್ಕೂ ಮನೆಗಳಿರುವ ಕಟ್ಟಡವನ್ನ ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಅದೇ ಸಮಯದಲ್ಲಿ ಅಲ್ಲೇ ಇದ್ದ ನಿವಾಸಿಗಳಿಗೆ ಮನೆ ಕೀ ಗಳನ್ನು ಕಾಮಗಾರಿ ಮುಕ್ತಾಯಕ್ಕೂ ಮುನ್ನವೇ ಹಸ್ತಾಂತರಿಸಿ ಸದ್ಯ ವರ್ಷ ಕಳೆದ್ರು ಮೂಲಭೂತ ಸೌಕರ್ಯಗಳನ್ನು ಒದಗಿಸದೇ, ಕಾಮಗಾರಿಯನ್ನ ಮುಗಿಸದೇ ನಿವಾಸಿಗಳು ಮನೆ ಬಾರದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಮನೆಗಳು ಖಾಲಿ ಇರುವ ಕಾರಣ ಸಂಪೂರ್ಣ ಬಿಲ್ಡಿಂಗ್ ಅನೈತಿಕ ಚಟುವಟಿಕೆ ತಾಣವಾಗ್ತಿದೆ. ಎಲ್ಲೆಂದರಲ್ಲಿ ಪುಂಡ ಪೋಕರಿಗಳ ಕಿಡಿಗೇಡಿತನ್ನ ಸರ್ಕಾರವೇ ಇಲ್ಲಿ ಜಾಗ ಮಾಡಿಕೊಟ್ಟಂತಾಗಿದೆ.

ಇನ್ನೂ ಈ ಬಗ್ಗೆ ಸ್ಥಳೀಯ ಶಾಸಕರನ್ನ ಕೇಳಿದ್ರೆ ನಮಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಇದೆಲ್ಲವನ್ನ ನಮ್ಮ ಕೈಯಿಂದ ಹಾಕಿ ಸರಿಪಡಿಸಿದ್ದೇವೆ ಅಂತಾ ಜಾರಿ ಕೊಳ್ಳುತ್ತಿದ್ದಾರಂತೆ. ನಿವಾಸಿಗಳಿಗೆ ನೀರು, ಕರೆಂಟ್ ಇಲ್ಲದೆ ಮನೆಗಳಲ್ಲಿ ಇರಲಾಗದೆ ಬಾಡಿಗೆ ಮನೆಯಲ್ಲಿ ವಾಸಕ್ಕೆ ಮುಂದಾಗಿದ್ದಾರೆ. ಮನೆ ನಿರ್ಮಾಣ ಮಾಡೋದಾಗಿ ಇದ್ದ ಮನೆಗಳನ್ನ ಖಾಲಿ ಮಾಡಿಸಿ ಹೊಸ ಕಟ್ಟಡಕ್ಕೆ ೬ ವರ್ಷ ತೆಗೆದುಕೊಂಡಿದ್ದ ಸರ್ಕಾರ, ಆ ಬಳಿಕವು ಸಂಪೂರ್ಣ ಮನೆಗಳನ್ನ ಸರಿಪಡಿಸದೇ ಬಡ ನಿವಾಸಿಗಳನ್ನ ರಸ್ತೆಗೆ ಬೀಳುವಂತೆ ಮಾಡಿದ್ದು, ನಿವಾಸಿಗಳು ಸಚಿವರು, ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಒಟ್ಟಾರೆ ಕನಸಿನ ಮನೆಯ ಆಸೆಯಲ್ಲಿದ್ದ ಬಡವರನ್ನ ಸರ್ಕಾರ ಬೀದಿಗೆ ತಳ್ಳಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದರೆ, ಈ ಕಟ್ಟಡುಗಳು ಪುಂಡ ಪೋಕರಿಗಳ ಕೊಂಪೇ ಆಗುವುದರಲ್ಲಿ ಅನುಮಾನವೇ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ