BWSSB, BBMP ನಿರ್ಲಕ್ಷ್ಯದಿಂದ ಜನರಿಗೆ ಕಂಟಕ

ಶನಿವಾರ, 25 ಫೆಬ್ರವರಿ 2023 (14:55 IST)
ಪೈಪ್ ಲೈನ್ ಗೆ ರಸ್ತೆ ಹಗೆದು ಟಾರ್ ಹಾಕದೇ ಬಿಟ್ಟ ಜಲಮಂಡಳಿ ವಿರುದ್ಧ ಜನರ ಆಕ್ರೋಶ ಹೊರಹಾಕಿದ್ದಾರೆ.ರಸ್ತೆಗೆ ಟಾರ್ ಹಾಕಿಸಿ ಅಂದ್ರು ಪಾಲಿಕೆ ಕ್ಯಾರೇ ಅಂದಿಲ್ಲ. ಪಾಲಿಕೆ ರಸ್ತೆ ಅಗೆದು ಟಾರ್ ಹಾಕದಿದ್ದರಿಂದ ನಿವಾಸಿಗಳಿಗೆ ಸಮಸ್ಯೆಯಾಗಿದೆ.
 
ಸುಂಕೇನಹಳ್ಳಿ ವಾರ್ಡ್ ನಂ.142 ನಲ್ಲಿರೋ 1 ಕಿ.ಮೀ ಉದ್ದದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಚರಂಡಿ ಸ್ಲ್ಯಾಬ್ ಗಳನ್ನ  ಸಿಬ್ಬಂದಿ ಎಸೆದಿದ್ದಾರೆ.ಚರಂಡಿ ಸ್ಲ್ಯಾಬ್ ಬಳಿ ಎಡವಿ ಹಿರಿಯ ನಾಗರೀಕರು ಬೀಳ್ತಿದ್ದಾರೆ.ಈ ಕಿತ್ತೋದ ರಸ್ತೆ ವಾಹನ ಸವಾರರಿಗೂ ಕಂಟಕವಾಗಿದೆ.ಧೂಳಿನಿಂದ ಏರಿಯಾದ ಜನರಿಗೆ ಆರೋಗ್ಯ ಸಮಸ್ಯೆ ಉಲ್ಬಣಿಸಿದೆ.ಪ್ರತಿದಿನ ರಸ್ತೆಗೆ ನೀರು ಹಾಕಿ ನಿವಾಸಿಗಳು ಧೂಳು ನಿಯಂತ್ರಿಸುತ್ತಿದ್ದಾರೆ.ಅಧಿಕಾರಿಗಳು, ಶಾಸಕರ ಗಮನಕ್ಕೆ ತಂದ್ರೂ ಯೂಸ್ ಮಾತ್ರ ಆಗಿಲ್ಲ.6 ತಿಂಗಳಿನಿಂದ ಇಲ್ಲಿನ ಜನರದ್ದು ಇದೇ ಗೋಳಾಗಿದೆ.ರಸ್ತೆಗೆ ಟಾರ್ ಹಾಕಿಸಿ ಅಂತಾ  ನಿವಾಸಿಗಳು ಮನವಿ ಮಾಡಿದ್ದಾರೆ.ಅಲ್ಲದೇ BWSSB, BBMP
ಇಲಾಖೆಯ ನಿರ್ಲಕ್ಷ್ಯಕ್ಕೆ ಹನುಮಂತ ನಗರ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ