ಲಾಕ್ ಡೌನ್ ಸಡಿಲ : ಯಾವುದಕ್ಕೆ ವಿನಾಯಿತಿ? ಯಾವುದು ಸಿಗೋದಿಲ್ಲ?

ಬುಧವಾರ, 22 ಏಪ್ರಿಲ್ 2020 (16:09 IST)
ರಾಜ್ಯ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡೋದಕ್ಕೆ ಮುಂದಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜನರಿಗೆ ಕೆಲವು ವಿನಾಯಿತಿಗಳು ದೊರೆಯಲಿವೆ.

ಕೊರೊನಾ ವೈರಸ್ ತಡೆಗೆ ಸರಕಾರ ಗಂಭೀರ ಹೆಜ್ಜೆ ಇಟ್ಟಿರುವ ನಡುವೆ, ಇದೀಗ ಲಾಕ್ ಡೌನ್ ಸಡಿಲಗೊಳಿಸೋಕೆ ಮುಂದಾಗಿದೆ.

ಕೆಲವು ಹೋಟೆಲ್ ಗಳಲ್ಲಿ ಪಾರ್ಸೆಲ್ ಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲದೇ ಖಾಸಗಿ ಕಾರುಗಳಲ್ಲಿ ಇಬ್ಬರು ಜಿಲ್ಲೆಯೊಳಗೆ ಮಾತ್ರ ಪ್ರಯಾಣ ಮಾಡೋಕೆ ಛಾನ್ಸ್ ಸಿಗುತ್ತದೆ.

ನಿಮ್ಮ ನಿಮ್ಮ ಏರಿಯಾಗಳಲ್ಲಿರುವ ದಿನಸಿ, ಹಾಲಿನ ಅಂಗಡಿಗಳು ಈ ಹಿಂದಿನಂತೆ ಕಾರ್ಯಾರಂಭ ಮಾಡಲಿವೆ.
ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ, ಅಗತ್ಯ ವಸ್ತುಗಳು ಇನ್ಮುಂದೆ ದೊರೆಯಲಿವೆ.

ಇನ್ನು, ರಿಯಲ್ ಎಸ್ಟೆಟ್, ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿ, ನೀರಾವರಿ, ಕೃಷಿ, ತೋಟಗಾರಿಕೆ ಯೋಜನೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಿಗೆ ಲಾಕ್ ಡೌನ್ ನಿಂದ ಸರಕಾರ ವಿನಾಯಿಸಿ ನೀಡೋದಕ್ಕೆ ಮುಂದಾಗಿದೆ.

ಇವೆಲ್ಲೆ ವಿನಾಯಿಗಳಲ್ಲಿ ಮಾಸ್ಕ್, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ