ಲಾಭ ಗಳಿಸಿದ ಪ್ರವಾಸಿ ತಾಣ ಯಾವುದು?

ಬುಧವಾರ, 9 ಫೆಬ್ರವರಿ 2022 (09:44 IST)
ಬೆಂಗಳೂರು : ಕೊವಿಡ್ನ ಮೊದಲ ಮತ್ತು ಎರಡನೇ ಅಲೆಯಲ್ಲಿ ಅದೆಷ್ಟೋ ಉದ್ಯಮಗಳು ನೆಲಕ್ಕಚ್ಚಿದ್ವು,

ಅದೆಷ್ಟೋ ಪ್ರವಾಸಿ ತಾಣಗಳು ಬಂದ್ ಆಗಿ ನಷ್ಟ ಅನುಭವಿಸಿದ್ದವು. ಇನ್ನೂ ಕೂಡ ಅದೆಷ್ಟೋ ಕೈಗಾರಿಕೆ ಉದ್ಯಮ ಕೆಲಸ ಕಾರ್ಯಗಳು ಈಗಲೂ ಪ್ರಾರಂಭವಾಗಿಲ್ಲ.

ಪ್ರವಾಸಿ ತಾಣಗಳ ಸ್ಥಿತಿ ಬಹಳ ಶೋಚನೀಯವಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೋಟ್ಯಾಂತರ ಹಣ ಲಾಭ ಗಿಟ್ಟಿಸಿಕೊಂಡಿದೆ. ಪ್ರೋಟೊಕಾಲ್ ಪಾಲಿಸುತ್ತಲೇ ಸರಕಾರಕ್ಕೆ ಕೋಟ್ಯಾಂತರ ಹಣ ಲಾಭ ಮಾಡಿಕೊಟ್ಟಿದೆ.

ಲಾಕ್ಡೌನ್, ಸೆಮಿ ಲಾಕ್ಡೌನ್, ವಿಕೆಂಡ್ ಕರ್ಫ್ಯೂ ಅಂತ ಹಲವು ದು ಮ್ಮಾನಗಳ ಮಧ್ಯೆಯೂ ತನ್ನ ಸೊಬಗು ಹಾಗೂ ಉತ್ತಮ ಆಡಳಿತದ ಪರಿಣಾಮ ನಷ್ಟದ ಕಾಲದಲ್ಲೂ ಲಾಭ ಕಂಡುಕೊಂಡಿದೆ.

2021ರ ಎಪ್ರಿಲ್ ತಿಂಗಳಿನಿಂದ 2022 ಜನವರಿಯವರೆಗು, ಬರೊಬ್ಬರಿ ಏಳು ಲಕ್ಷ ಪ್ರವಾಸಿಗರು ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜೂ ಹಾಗೂ ಸಫಾರಿ ಎಂಜಾಯ್ ಮಾಡುವುದಕ್ಕೆ ಬಂದ ಪ್ರವಾಸಿಗರಿಂದ ಒಟ್ಟು 8 ಕೋಟಿ 84 ಲಕ್ಷ ಹಣ ಇಲಾಖೆಗೆ ಸಂದಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ