ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಕ್ಕೆ ವಿರೋಧ ಹೆಚ್ಚಾಗುತ್ತಿದೆ.
ನಿಖಿಲ್ ಸ್ಪರ್ಧೆ ವಿರೋಧಿಸಿ ಮೂರನೇ ದಿನವೂ ಮುಂದುವರೆದ ಉಪವಾಸ ಸತ್ಯಾಗ್ರಹದಲ್ಲಿ ಹಲವರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಮುಖಂಡನಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಡಾ.ರವೀಂದ್ರ, ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾಗಿದ್ದಾರೆ ಅಲ್ಲದೇ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಅಸ್ತಿತ್ವ, ಸ್ವಾಭಿಮಾನದ ಪ್ರಶ್ನೆಯಾಗಿದೆ. ರಾಜಕೀಯವಾಗಿ ಸುಮಲತಾ ವಿರುದ್ಧ ಅಸಭ್ಯ ಪದ ಬಳಸುವ ರಾಜಕಾರಣಿಗಳ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹೊರಗಿನವರಾದ ನಿಖಿಲ್ ಸ್ಪರ್ಧೆ ವಿರೋಧಿಸಿ ಸಾಂಕೇತಿಕ ಹೋರಾಟ ನಡೆಯುತ್ತಿದೆ.
ಸಿಎಂ ಪುತ್ರ ಎಂಬ ಕಾರಣಕ್ಕೆ ನಿಖಿಲ್ ಸ್ಪರ್ಧೆ ಸೂಕ್ತವಲ್ಲ ಎಂದು ಮೂರು ದಿನಗಳ ಕಾಲ ಮೌನ ಮತ್ತು ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಪ್ರತಿಭಟನಾನಿರತ ಡಾ.ರವೀಂದ್ರಗೆ ಕೈ ಕಾರ್ಯಕರ್ತರ ಸಾಥ್ ದೊರಕಿದೆ.