15 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ! ದಾಳಿಯಲ್ಲಿ ಸಿಕ್ಕಿದ್ದಾದ್ರು ಏನು?

ಗುರುವಾರ, 29 ಜೂನ್ 2023 (07:43 IST)
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ 15 ಅಧಿಕಾರಿಗಳ ವಿರುದ್ಧ 62 ಕಡೆ ಲೋಕಾಯುಕ್ತ ದಾಳಿ ನಡೆಸಿದೆ.

ಬೆಂಗಳೂರು, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ, ರಾಯಚೂರು, ಬಾಗಲಕೋಟೆ, ವಿಜಯಪುರದಲ್ಲಿ ಶೋಧ ನಡೆಸಿದೆ.

ಕೆ.ಆರ್.ಪುರ ತಹಶೀಲ್ದಾರ್ ಅಜಿತ್ ರೈ, ಬಾಗಲಕೋಟೆಯ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್, ಬೀಳಗಿಯ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರು, ವಿಜಯಪುರದ ಪಿಡಬ್ಲೂಡಿ ಇಲಾಖೆ ಜೆಇ ಭೀಮನಗೌಡ ಬಿರಾದಾರ್, ಬೆಳಗಾವಿಯ ಹೆಸ್ಕಾಂನ ಎಂಜಿನಿಯರ್ ಶೇಖರ್ ಬಹುರೂಪಿ, ಗೌರಿಬಿದನೂರು ಅಬಕಾರಿ ಇನ್ಸ್ಪೆಕ್ಟರ್ ರಮೇಶ್,

ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗಂಗಾಧರ್, ಕಲಬುರಗಿಯ ಟೌನ್ ಪ್ಲಾನಿಂಗ್ ಅಧಿಕಾರಿ ಶರಣಪ್ಪ, ಕೋಲಾರದ ಕ್ರೆಡಲ್ ಎಇಇ ಕೋದಂಡರಾಮಯ್ಯ, ಕುಶಾಲನಗರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಅಬ್ದುಲ್ ಬಷೀರ್, ತುಮಕೂರಿನ ಕೃಷಿ ಇಲಾಖೆ ನಿರ್ದೇಶಕ ಕೆ.ಎಚ್ ರವಿ, ಯಾದಗಿರಿಯ ಪಿಡಬ್ಲೂಡಿ ಎಇಇ ವಿಶ್ವನಾಥ ರೆಡ್ಡಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಲೋಕಾಯುಕ್ತ ಶೋಧಿಸಿದೆ. ಹಲವೆಡೆ ಹೈಡ್ರಾಮಾ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ