ಇನ್ನೂ ಶಾಸಕ ವಿರೂಪಾಕ್ಷಪ್ಪ ಕೆಎಸ್ ಡಿ ಎಲ್ ಅಧ್ಯಕ್ಷರಾಗಿದ್ರು.ಇದೇ ಇಲಾಖೆಯ ಟೆಂಡರ್ ವಿಚಾರವಾಗಿ ಕಮಿಷನ್ ಹಣ ಕೇಳಿದ್ರು ಅನ್ನೋ ಆರೋಪ ಇದೆ.ಪುತ್ರ ಲಾಕ್ ಆಗ್ತಿದ್ದಂತೆ ಪರಾರಿ ಆಗಿರೋ ಶಾಸಕ ವಿರೂಪಾಕ್ಷಪ್ಪ ಪತ್ತೆಗೆ ಓರ್ವ ಡಿವೈಎಸ್ ಪಿ,ಇಬ್ಬರು ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿದ್ದು,ಬೆಂಗಳೂರು,ದಾವಣಗೆರೆ ಸೇರಿದಂತೆ ಹಲವೆಡೆ ತಲಾಶ್ ನಡೆಸಲಾಗ್ತಿದೆ.ಅಲ್ಲದೇ ಶಾಸಕರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.ಅಲ್ಲದೇ ಹಣದ ವಿವರಣೆ ಕೇಳಲು ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.ಈ ನಡುವೆ ಶಾಸಕರನ್ನು ಬಂಧಿಸದಂತೆ ರಾಜಕೀಯ ಒತ್ತಡ ಕೂಡ ಹೆಚ್ಚಾಗ್ತಿದೆಯಂತೆ.