ಲೋಕಯುಕ್ತ ದಾಳಿ-ಬ್ರೋಕರ್ , ಕಂಪ್ಯೂಟರ್ ಆಪರೇಟರ್ ಗಳ ಜೊತೆ ಅಧಿಕಾರಿಗಳು ಶಾಮೀಲು...!

ಶನಿವಾರ, 5 ನವೆಂಬರ್ 2022 (14:24 IST)
ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದೆ. ಹಂತ ಹಂತವಾಗಿ ಭ್ರಷ್ಟಾಚಾರ ನಡೆಯುತ್ತಿರುವ ಕೆಲ ಕಚೇರಿಗಳ ಮೇಲೆ ದಾಳಿ ನಡೆಸುತ್ತಿರುವ ಲೋಕಾಯುಕ್ತ, ಭ್ರಷ್ಟರನ್ನ ರೆಡ್ ಹ್ಯಾಂಡಾಗಿ ಹಿಡಿಯಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.ನಿರಂತರವಾಗಿ ಭ್ರಷ್ಟತೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. 
 
ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಾಚಾರದ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ನೆನ್ನೆ 14 ಕಡೆ ಏಕಕಾಲದಲ್ಲಿ  ಸಬ್ ರಿಜಿಸ್ಟರ್ ಕಚೇರಿ ಮೇಲೆ ದಾಳಿ ನಡೆಸಿದಾಗ ಭ್ರಷ್ಟಾಚಾರದ ಸಾಕ್ಷಿಗೆ ಲಕ್ಷಾಂತರ ರೂಪಾಯಿಯನ್ನ ಲೋಕಾಯುಕ್ತ ಅಧಿಕಾರಿಗಳು ಸೀಝ್ ಮಾಡಿದ್ದಾರೆ.ನಾಗವಾರ ,ಬನಶಂಕರಿ ,ಕೋರಮಂಗಲ, ಬಾಣಸವಾಡಿ, ನಗರದ ಹೊರವಲಯದಲ್ಲಿರುವ ಆನೇಕಲ್ ,ಹೊಸಕೋಟೆ, ದೊಡ್ಡ ಬಳ್ಳಾಪುರ ಹಾಗೂ ಬನ್ನೇರುಘಟ್ಟ ಸೇರಿ 14 ಕಡೆ ದಾಳಿ ನಡೆಸಿ ಒಟ್ಟು 7.5 ಲಕ್ಷದಷ್ಟು ಲಂಚದ ಹಣವನ್ನ ವಶಕ್ಕೆ ಪಡೆಯಲಾಗಿದೆ.
 
 ಇನ್ನು ಗ್ರಾಮಾಂತರ ಸಬ್ ರಿಜಿಸ್ಟರ್ ಕಚೇರಿಯಲ್ಲಿಯೇ 2ಲಕ್ಷದ 64 ಸಾವಿರದ 920 ರೂಪಾಯಿ ಲಂಚದ ಹಣ ಸಿಕ್ಕಿದೆ. ಎಸಿಬಿ ಬಂದ ಬಳಿಕ ಸರ್ಕಾರಿ ಅಧಿಕಾರಿಗಳು ಯಾವ ಭಯವಿಲ್ಲದೆ ಭ್ರಷ್ಟತೆಯಲ್ಲಿ ತೊಡಗುತ್ತಿದ್ರು. ಎಸಿಬಿ  ತಮ್ಮ ಕಚೇರಿಗಳ ಮೇಲೆ ದಾಳಿ ನಡೆಸೋದಿಲ್ಲ ಎಂಬ ನಂಬಿಕೆಗಳಿದ್ವು. ಅದನ್ನ ಅಭ್ಯಾಸ ಮಾಡಿಕೊಂಡಿದ್ದ ಅಧಿಕಾರಿಗಳು ಲೋಕಾಯುಕ್ತದ ಪ್ರಭಾವ ತಿಳಿಯದೆ ಲಂಚಾವತಾರವನ್ನ ಮುಂದುವರೆಸಿದ್ರು. ಅಂತಹ ಇಲಾಖೆ ಮೇಲೆ ನಡೆದ ಹಠಾತ್ ದಾಳಿಯಿಂದ ನಿಜಕ್ಕೂ ಶಾಕ್ ಆಗಿದ್ದಾರೆ. ಇನ್ನು  ಚೈನ್ ಲಿಂಕ್ ನಂತೆ ಭ್ರಷ್ಟತೆ ಇದ್ದು, ಬ್ರೋಕರ್ , ಕಂಪ್ಯೂಟರ್ ಆಪರೇಟರ್ ಹಾಗು ಸಬ್ ರಿಜಿಸ್ಟರ್ ಆಫೀಸರ್ ಗಳ ಮಧ್ಯೆ ಲಕ್ಷಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಕಮಿಷನ್ ರೂಪದಲ್ಲಿ ಕೂಡ ಬ್ರೋಕರ್ ಗಳು ಜನರಿಂದ ಹಣ ಸುಲಿಗೆ ಮಾಡಲಾಗ್ತಿದೆ.ಇನ್ನು ಈಗಾಗಲೇ ಸಿಕ್ಕಿಬಿದ್ದಿರುವ ಕೆಲ ಅಧಿಕಾರಿಗಳಿಗೆ ನೊಟೀಸ್ ನೀಡಿದ್ದು , ನೊಟೀಸ್ ಗೆ ಉತ್ತರಿಸದಿದ್ದರೆ ನೇರವಾಗಿ ಜೈಲುಪಾಲಾಗುವ ಸಾಧ್ಯತೆ ಇದೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ