ಲವ್ ಮ್ಯಾಟರ್ ನಲ್ಲಿ ಅಡ್ಡ ಬಂದ ಗೆಳೆಯನ ಕುತ್ತಿಗೆಗೆ ಬಿತ್ತು ಲಾಂಗ್

ಶುಕ್ರವಾರ, 14 ಫೆಬ್ರವರಿ 2020 (20:20 IST)

ಲವ್ ಮ್ಯಾಟರ್ ನಲ್ಲಿ ಅಡ್ಡ ಬಂದ ಗೆಳೆಯನನ್ನೇ ಸ್ನೇಹಿತನೊಬ್ಬ ಲಾಂಗ್ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ.
 

ಪ್ರಶಾಂತ್ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದರೆ, ಸ್ನೇಹಿತನೇ ಆಗಿದ್ದ ಲೋಕೇಶ್ ಗಂಭೀರ ಗಾಯದೊಂದಿಗೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಹುಡುಗಿಯೊಬ್ಬಳನ್ನು ಪ್ರಶಾಂತ್ ಲವ್ ಮಾಡುತ್ತಿದ್ದನು. ಇವರ ಲವ್ ಮ್ಯಾಟರ್ ನಲ್ಲಿ ತಲೆ ಹಾಕಿದ ಲೋಕೇಶ್ ನು ತನ್ನ ಸ್ನೇಹಿತ ಪ್ರಶಾಂತ್ ರೌಡಿ ಇದ್ದಾನೆ. ಹಾಗೆ ಹೀಗೆ ಅಂತ ಹುಡುಗಿಯ ತಲೆ ತುಂಬಿದ್ದಾನೆ. ಇದರಿಂದ ಹುಡುಗಿ ದೂರವಾಗಿದ್ದಳು.

ಇದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಲೋಕೇಶ್ ನ ಮೇಲೆ ಪ್ರಶಾಂತ್ ಲಾಂಗ್ ನಿಂದ ದಾಳಿ ನಡೆಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ