ಲಾಟರಿ ಹಗರಣ: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವಿರುದ್ಧವು ಎಸಿಬಿಗೆ ದೂರು

ಶನಿವಾರ, 21 ಮೇ 2016 (17:12 IST)
ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೇರಿದಂತೆ 10 ಜನರ ವಿರುದ್ಧ ರಾಜ್ಯ ಲಾಟರಿ ಮಾರಾಟ ಮತ್ತು ಎಜೆಂಟ್‌ ಸಂಘದ ಅಧ್ಯಕ್ಷ ಸಿ.ರಾಮಕೃಷ್ಣ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಿಸಿದ್ದಾರೆ.
 
2001-07 ರ ಸಾಲಿನಲ್ಲಿ ಲಾಟರಿ ಮಾರಾಟದಲ್ಲಿ ನಡೆದಿರುವ ಹಗರಣದ ಕುರಿತು ತನಿಖೆ ನಡೆಸುವಂತೆ ಮೈಸೂರ್ ಮೂಲದ ಸಿ ರಾಮಕೃಷ್ಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.
 
ಎಸ್‌.ಎಮ್‌.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲಾಟರಿ ಮಾರಾಟದಿಂದ ಬಂದ ಲಾಭವನ್ನು ತಮ್ಮ ಕ್ಷೇತ್ರದಲ್ಲಿ  ಬಿಸಿ ಊಟಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಲಾಟರಿ ಮಾರಾಟದಿಂದ ಬರುವ ಲಾಭವನ್ನು ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವ ಭರವಸೆ ನೀಡಿ,  ಫ್ಲೇವಿನ್ ಲಾಟರಿಗೆ ಪರವಾನಿಗೆ ನೀಡಿದ್ದರು. ಸಿಎಜಿ ನಿಯಮದ ಪ್ರಕಾರ ಒಂದು ಕಂಪೆನಿಗೆ ಮಾತ್ರ ಲಾಟರಿ ಪರವಾನಿಗೆ ನೀಡಲಾಗಿತ್ತು. ನಂತರ ಅನಧಕೃತವಾಗಿ ಬೇರೆ ಬೇರೆ ಕಂಪನಿಗಳಿಗೂ ಅಕ್ರಮವಾಗಿ ಪರವಾನಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ