ಅಮರನಾಥ ಯಾತ್ರೆ 2025: ಐದು ಬಸ್‌ಗಳು ಪರಸ್ಪರ ಡಿಕ್ಕಿ, 36ಯಾತ್ರಾರ್ಥಿಗಳಿಗೆ ಗಾಯ

Sampriya

ಶನಿವಾರ, 5 ಜುಲೈ 2025 (15:04 IST)
Photo Credit X
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಶನಿವಾರ ಐದು ಬಸ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಯಾತ್ರಾರ್ಥಿಗಳು ಅಮರನಾಥ ಯಾತ್ರೆಗೆ ತೆರಳುತ್ತಿದ್ದಾಗ ಗಾಯಗೊಂಡಿರುವ ಘಟನೆ ನಡೆದಿದೆ. 

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಚಂದರ್‌ಕೂಟ್ ಬಳಿ ಬೆಳಿಗ್ಗೆ 8 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಾವಲು ಪಡೆಯಲ್ಲಿರುವ ಬಸ್‌ ಒಂದರ ಬ್ರೇಕ್ ವೈಫಲ್ಯದಿಂದ ಡಿಕ್ಕಿ ಸಂಭವಿಸಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

"ಪಹಲ್ಗಾಮ್ ಬೆಂಗಾವಲು ಪಡೆಯ ಕೊನೆಯ ವಾಹನವು ನಿಯಂತ್ರಣ ಕಳೆದುಕೊಂಡು ಚಂದರ್‌ಕೋಟ್ ಲ್ಯಾಂಗರ್ ಸೈಟ್‌ನಲ್ಲಿ ಸಿಕ್ಕಿಬಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ, ನಾಲ್ಕು ವಾಹನಗಳಿಗೆ ಹಾನಿಯಾಗಿದೆ ಮತ್ತು 36 ಯಾತ್ರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ" ಎಂದು ರಾಂಬನ್ ಉಪ ಆಯುಕ್ತ ಮೊಹಮ್ಮದ್ ಅಲಿಯಾಸ್ ಖಾನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ