ರಜೆ ಕೇಳಿದ್ದಕ್ಕೆ ಮಾಲೀಕ ಗದರಿದ್ದಕ್ಕೆ ಆತನ ಪತ್ನಿ, ಮಗನನ್ನೇ ಕೊಂದ ಕೆಲಸದಾತ

Sampriya

ಶನಿವಾರ, 5 ಜುಲೈ 2025 (16:05 IST)
Photo Credit X
ದೆಹಲಿಯ ಲಜಪತ್ ನಗರದಲ್ಲಿನ 42 ವರ್ಷದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶನಿವಾರ ದಾಖಲಾಗಿದೆ. 

ಅಪರಾಧ ಎಸಗಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಅಂಗಡಿಯ ಕೆಲಸಗಾರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರನ್ನು ರುಚಿಕಾ ಸೇವಾನಿ ಮತ್ತು ಅವರ 14 ವರ್ಷದ ಮಗ ಕ್ರಿಶ್ ಎಂದು ಗುರುತಿಸಲಾಗಿದೆ. ಆರೋಪಿ, 24 ವರ್ಷದ ಮುಖೇಶ್, ರುಚಿಕಾ ಅವರ ಪತಿ ಕುಲದೀಪ್ ಸೆವಾನಿ ಒಡೆತನದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

"ನಾನು ಅವನನ್ನು ಯಾವುದರ ಬಗ್ಗೆಯೂ ಗದರಿಸಿಲ್ಲ. ನಾನು ಯಾವಾಗಲೂ ಅವರ ಜತೆ ಸಭ್ಯನಾಗಿಯೇ ನಡೆದುಕೊಂಡಿದ್ದು, ಯಾಕೆ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಗೊತ್ತಾಗ್ತಿಲ್ಲ ಎಂದು ಆಕೆಯ ಪತಿ ಹೇಳಿದ್ದಾರೆ. 

ಪೊಲೀಸ್ ತನಿಖೆಯಲ್ಲಿ ಆಗಾಗ ರಜೆ ಹಾಕಿದ್ದಕ್ಕೆ ಛೀಮಾರಿ ಹಾಕಿದ್ದರಿಂದ ಮನನೊಂದ ಮುಖೇಶ್ ದಾಳಿಗೆ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯಾದ ಕೆಲವೇ ಗಂಟೆಗಳ ನಂತರ ಅವರನ್ನು ಗುರುವಾರ ಮುಂಜಾನೆ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಬಂಧಿಸಲಾಯಿತು.

"ರಾತ್ರಿ 9.30 ರ ಸುಮಾರಿಗೆ, ಮನೆಯೊಳಗೆ ರಕ್ತವಿದೆ ಮತ್ತು ಯಾರೂ ಬಾಗಿಲು ತೆರೆಯುತ್ತಿಲ್ಲ ಎಂದು ನನಗೆ ಉದ್ರಿಕ್ತ ಕರೆ ಬಂತು" ಎಂದು ಕುಲದೀಪ್ ಅವರ ಸೋದರಸಂಬಂಧಿ ಕೇತನ್ ಹೇಳಿದರು. ಕೇತನ್ ಮನೆಗೆ ಧಾವಿಸಿ ನಂತರ ಪೊಲೀಸರ ಸಹಾಯದಿಂದ ಒಳಪ್ರವೇಶಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ