ಯುವತಿಯೊಬ್ಬಳನ್ನು ಮುಂದೆ ಬಿಟ್ಟು ಲವ್ ಮಾಡುವಂತೆ ಮಾಡಿ ಆ ಬಳಿಕ ಯಾಮಾರಿದ ಹುಡುಗರಿಂದ ಹಣ ದೋಚುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ.
ಯುವಕರಿಗೆ ಪ್ರೀತಿ ಮಾಡೋದಾಗಿ ಹೇಳುತ್ತಿದ್ದ ಅಣ್ಣಮ್ಮ ಎಂಬಾಕೆ ತನ್ನ ಬಲೆಗೆ ಬಿದ್ದ ಯುವಕರನ್ನು ಯಾರೂ ಇಲ್ಲದ ಕಡೆ ಕರೆಯುತ್ತಿದ್ದಳು.
ಅಣ್ಣಮ್ಮಳ ಮಾತಿಗೆ ಮರುಳಾಗಿ ಬಂದ ಯುವಕರನ್ನು ನವೀನ್, ಶಶಾಂಕ್, ಮುನೇಂದ್ರ ಹಾಗೂ ನಾಗೇಶ್ ಎಂಬ ಆರೋಪಿಗಳು ಹೆದರಿಸಿ ಬೆದರಿಸಿ ಅವರಿಂದ ಹಣ, ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು.
ಈ ಕುರಿತು ಮೋಸ ಹೋದ ಯುವಕನೊಬ್ಬ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದನು. ಪ್ರಕರಣದ ವಿಚಾರಣೆ ಕೈಗೊಂಡು ಪೊಲೀಸರು ಆರು ಜನರನ್ನು ಬಂಧನ ಮಾಡಿದ್ದಾರೆ.