ಬಿಪಿ ಒಮ್ಮೆ ಬಂದರೆ ಮಾತ್ರೆ ತೆಗೆದುಕೊಳ್ಳುತ್ತಲೇ ಇರಬೇಕೇ, ಡಾ ಸಿಎನ್ ಮಂಜುನಾಥ್ ಸಲಹೆ ಇಲ್ಲಿದೆ

Krishnaveni K

ಶನಿವಾರ, 9 ಆಗಸ್ಟ್ 2025 (11:00 IST)
ಬಿಪಿ ಬಂದರೆ ಜೀವನ ಪರ್ಯಂತ ಮಾತ್ರೆ ತೆಗೆದುಕೊಳ್ಳಲೇಬೇಕೇ ಎಂದು ಹಲವರಿಗೆ ಗೊಂದಲಗಳಿರುತ್ತವೆ. ಅಂತಹವರಿಗೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಸಂವಾದ ಕಾರ್ಯಕ್ರಮವೊಂದರಲ್ಲಿ ಹಿಂದೊಮ್ಮೆ ನೀಡಿದ್ದ ಸಲಹೆ ಉಪಯುಕ್ತವಾಗಲಿದೆ.

ರಕ್ತದೊತ್ತಡ ಎನ್ನುವುದು ಇಂದು ಮಧ್ಯ ವಯಸ್ಸಿನವರಿಗೆ ಸಾಮಾನ್ಯವಾಗಿದೆ. ರಕ್ತದೊತ್ತಡ 120/90 ಇದ್ದರೆ ನಾರ್ಮಲ್ ಎನ್ನಬಹುದು. ಆದರೆ ನಿರಂತರವಾಗಿ 150/90 ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ ರಕ್ತದೊತ್ತಡ ಇರುವವರು ಜೀವನಪರ್ಯಂತ ಮಾತ್ರೆ ತೆಗೆದುಕೊಳ್ಳಲೇಬೇಕು. ಸಾಮಾನ್ಯವಾಗಿ ಯಾವುದೇ ವೈದ್ಯರು ಒಮ್ಮೆ ರಕ್ತದೊತ್ತಡ ಹೆಚ್ಚು ಬಂದ ತಕ್ಷಣವೇ ನಿರಂತರವಾಗಿ ಮಾತ್ರೆ ತೆಗೆದುಕೊಳ್ಳಲು ಹೇಳಲ್ಲ. ಒಂದೆರಡು ಪರೀಕ್ಷೆ ಮಾಡಿದ ಬಳಿಕವೂ ರಕ್ತದೊತ್ತಡ ಹೆಚ್ಚು ಕಂಡುಬಂದರೆ ಮಾತ್ರ ಮಾತ್ರೆ ತೆಗೆದುಕೊಳ್ಳಲು ಹೇಳುತ್ತಾರೆ.

ರಕ್ತದೊತ್ತಡ ಮಾತ್ರೆ ಒಂದು ತಿಂಗಳು ತೆಗೆದುಕೊಂಡು ನಂತರ ಯಾಕೆ ತೆಗೆದುಕೊಳ್ಳಬೇಕು ಎಂದು ತೆಗೆದುಕೊಳ್ಳದೇ ಹೋದರೆ ಅದರ ಪರಿಣಾಮ ಖಂಡಿತಾ ಕಂಡುಬರುತ್ತದೆ. ತಕ್ಷಣಕ್ಕೇ ಬರದೇ ಹೋದರೂ ಒಂದೋ, ಎರಡೋ ವರ್ಷಗಳಲ್ಲೇ ಅದರ ಪರಿಣಾಮವಾಗಿ ಲಕ್ವ ಹೊಡೆಯುವುದು, ಹೃದಯಾಘಾತದಂತಹ ಸಮಸ್ಯೆ ಬರಬಹುದು. ಲಕ್ವ ಹೊಡೆದರೆ ಜೀವನ ಪರ್ಯಂತ ನಿಮಗೆ ಮಾತ್ರವಲ್ಲ, ನಿಮ್ಮನ್ನು ನೋಡಿಕೊಳ್ಳುವವರಿಗೂ ತೊಂದರೆ. ಹೀಗಾಗಿ ರಕ್ತದೊತ್ತಡ ಮಾತ್ರೆಯನ್ನು ಯಾವುದೇ ಕಾರಣಕ್ಕೂ ವೈದ್ಯರು ಸಲಹೆ ನೀಡಿದಲ್ಲಿ ತೆಗೆದುಕೊಳ್ಳದೇ ಇರಬಾರದು ಎನ್ನುವುದು ಅವರ ಸಲಹೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ