ಪ್ರೀತಿಸಿ ಗರ್ಭಿಣಿ ಮಾಡಿದ: ಆ ಮೇಲೆ ತಾಳಿ ಕಟ್ಟಿದ ಪ್ರಿಯಕರ

ಭಾನುವಾರ, 22 ಸೆಪ್ಟಂಬರ್ 2019 (20:00 IST)
ಪ್ರೇಮಿಗಳಿಬ್ಬರು ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಪರಸ್ಪರ ಹೂಮಾಲೆ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  

ಮಂಡ್ಯ ಪಟ್ಟಣದ  ಕಛೇರಿಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಪರಸ್ಪರ ಹೂಮಾಲೆ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಪ್ರೇಮಿಗಳು. 

ಕಳೆದ ಮೂರು ವರ್ಷಗಳಿಂದ ಪರಸ್ಪರ ಇಷ್ಟಪಟ್ಟು ಪ್ರೀತಿಸುತ್ತಿದ್ದ ನವಜೋಡಿಗಳು, ಸಾರ್ವಜನಿಕರು 
ಹಾಗೂ ಬಂಧುಗಳ ಸಹಕಾರದಿಂದ ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಕಛೇರಿ ಬಳಿ ಇರುವ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪಾಂಡವಪುರ ತಾಲ್ಲೂಕಿನ ಬಳಘಟ್ಟ ವ್ಯಾಪ್ತಿಯಲ್ಲಿ ಸೆಸ್ಕ್ ನೌಕರನಾಗಿ 
ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಮತ್ತು ಅಕ್ಷತಾ ಪರಸ್ಪರ ಪ್ರೇಮಿಸುತ್ತಿದ್ದರು. ತಂದೆ ತಾಯಿಗಳು ಹಾಗೂ ಸಂಬಂಧಿಗಳ ಭಯದಿಂದ ವಿವಾಹವಾಗದೇ ಉಳಿದಿದ್ದರು.

ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಂಡಿದ್ದ ಪ್ರೇಮಿಗಳು ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು.
ದಿನಕಳೆದಂತೆ ಅಕ್ಷತ ಗರ್ಭಿಣಿಯಾಗಿ ತಾಯಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ನೇಹಿತರು ಹಾಗೂ ಬಂಧುಗಳ ಸಹಕಾರವನ್ನು ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ