ಚಿತ್ರದುರ್ಗ: ಶ್ರೀ ತಪ್ಪೇರುದ್ರಸ್ವಾಮಿ ವೇದ ಪಾಠಶಾಲೆಯಲ್ಲಿ ಸಂಸ್ಕೃತ ಶಿಕ್ಷಕ ವೀರೇಶ್ ಬಾಲಕನಿಗೆ ಥಳಿಸಿ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದಿದ್ದು ಇಂದು ನಿನ್ನೆ ಅಲ್ಲ ಎಂದು ತಿಳಿಬಂದಿದೆ.
ತನ್ನ ಅಜ್ಜಿಗೆ ಫೋನ್ ಕರೆ ಮಾಡಿದ ತಪ್ಪಿಗೆ ಶಿಕ್ಷಕ ವೀರೇಶ್ ಮಾನವೀಯತೆಯನ್ನೇ ಮರೆತು ಕಾಲಿನಿಂದ ಮನಬಂದಂತೆ ಒದ್ದು ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೇ ಆತ ಬಂಧನ ಭೀತಿಯಲ್ಲಿ ಕಲಬುರಗಿಗೆ ಎಸ್ಕೇಪ್ ಆಗಿದ್ದ. ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆತನನ್ನು 2 ದಿನಗಳಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಇದೀಗ ಆತ ಚಿತ್ರದುರ್ಗದ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಶಾಕಿಂಗ್ ವಿಚಾರವೆಂದರೆ ಈ ಘಟನೆ ನಡೆದಿದ್ದು ಈಗ ಅಲ್ಲ. ಒಂದು ವರ್ಷದ ಹಿಂದೆ ನಡೆದಿದ್ದು ಈಗ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ. ಆದರೆ ಸೋಷಿಯಲ್ ಮೀಡಿಯಾ ಪವರ್ ನಿಂದ ಈಗಲಾದರೂ ಘಟನೆ ಬೆಳಕಗೆ ಬಂದಿದೆ.