ಮ್ಯಾನುವೆಲ್ ಚೇಂಬರ್‍ನಲ್ಲಿ ಇಳಿಸುವುದು ಅಕ್ಷಮ್ಯ ಅಪರಾಧ

ಸೋಮವಾರ, 17 ಸೆಪ್ಟಂಬರ್ 2018 (19:38 IST)
ಸಫಾಯಿ ಕರ್ಮಚಾರಿಗಳ ಮ್ಯಾನುವೆಲ್ ಸ್ಕ್ಯಾವೆಂಜರ್ ನಿಷೇಧ ಕಾಯ್ದೆ-2013ರನ್ವಯ ಸಾರ್ವಜನಿಕರು ಯಾವುದೇ ವ್ಯಕ್ತಿಯನ್ನು ಮ್ಯಾನಹೋಲ್ ಚೇಂಬರ್‍ನಲ್ಲಿ ಇಳಿಸಬಾರದು. ಚೆಂಬರ್‍ನಲ್ಲಿ ಇಳಿಸುವುದು ಹಾಗೂ ಇಳಿಯುವುದು ಅಕ್ಷಮ್ಯ ಅಪರಾಧವಾಗುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು  ತಿಳಿಸಿದ್ದಾರೆ.

ಸಾರ್ವಜನಿಕರು ಇಂತಹ ಕೃತ್ಯಗಳನ್ನು ಮಾಡಬಾರದೆಂದು ಹಾಗೂ ಇಂತಹ ಕೃತ್ಯಗಳಲ್ಲಿ ಭಾಗವಹಿಸುವವರ ವ್ಯಕ್ತಿಗಳ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುತ್ತದೆ. ಯಾರಾದರೂ ಇಂತಹ ಕೃತ್ಯಗಳಲ್ಲಿ ಭಾಗವಹಿಸಿದ್ದಲ್ಲಿ ಕೂಡಲೇ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ತಿಳಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ