ಮತ್ತೆ 25 ರೂಪಾಯಿ ಹೆಚ್ಚಳವಾಯ್ತು LPG ಸಿಲಿಂಡರ್ ದರ

ಬುಧವಾರ, 1 ಸೆಪ್ಟಂಬರ್ 2021 (20:17 IST)
ಬೆಂಗಳೂರು: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗ್ತಾನೆ ಇದೆ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲದಂತಾಗೋಗಿದೆ. ಪೆಟ್ರೋಲ್ ಡೀಸೆಲ್ ಸೇರಿದಂತೆ ಅಗತ್ಯ ಸಾಮಗ್ರಿಗಳ ಬೆಲೆ ಹೆಚ್ಚಾಳದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ರೆ ಮತ್ತೊಂದೆಡೆ ಪ್ರತಿ ತಿಂಗಳು ಹೆಚ್ಚಳವಾಗ್ತಿರುವ ಗ್ಯಾಸ್ ಸಿಲಿಂಡರ್ ಬೆಲೆ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ ಆಗಸ್ಟ್ ತಿಂಗಳಲ್ಲೇ 2 ಬಾರಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹೀಗಾಗಿ ನಗರದಲ್ಲಿ ಎಲ್ಲೆಡೆ  ಆಕ್ರೋಶ ಮುಗಿಲುಮುಟ್ಟಿದೆ. ಹೌದು, ರಾಜ್ಯದ ಜನತೆ ಬೆಲೆ ಏರಿಕೆಗೆ ಆಕ್ಷರಶಹ ಬೇಸತ್ತು ಹೋಗಿದ್ದಾರೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ‌ ಬೆಲೆ ಏರಿಕೆ ಆಗುತ್ತಿದೆಯೇ ಹೊರತು ಕಡಿಮೆ ಮಾತ್ರ ಆಗ್ತಿಲ್ಲ. ಇದರಿಂದ ತತ್ತರಿಸಿ ಹೋದ ಜನರಿಗೆ ಸರ್ಕಾರ ಮತ್ತೊಂದು ಶಾಕ್‌ ಕೊಟ್ಟಿದೆ.  ಪ್ರತಿ ತಿಂಗಳಂತೆ ಈ ತಿಂಗಳು ಸಹ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು ಜನ ತತ್ತರಿಸುವಂತಾಗಿದೆ ಆಗಸ್ಟ್ ಮೊದಲ ವಾರದಲ್ಲಿ ಏರಿಕೆಯಾಗಿದ್ದ ದರ ಮತ್ತೆ 3ನೇ ವಾರವೂ ಏರಿಕೆಯಾಗಿದೆ.
 
 ರಾಜಧಾನಿಯ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಆಟೋ ಡ್ರೈವರ್ಸ್ ಗಳ ಸಂಘಟನೆ ದರ ಏರಿಕೆಯ ವಿರುದ್ದ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ರು, ಅಷ್ಟೇ ಅಲ್ಲದೆ  ಮೀಟರ್ ದರ ಪರಿಷ್ಕರಣೆ ಮಾಡಬೇಕು. ಸಿಲಿಂಡರ್ ದರ ಸೇರಿದಂತೆ ಪೆಟ್ರೋಲ್ ,ಡಿಸೇಲ್ ದರ ಇಳಿಕೆ ಮಾಡಬೇಕೆಂದು ಪ್ರತಿಭಟನೆ ಮಾಡಿದ್ರು. ಮಾನ್ಯ ಜಿಲ್ಲಾಧಿಕಾರಿಗೆ ಬೇಡಿಕೆಗಳ ಕುರಿತು ಮನವಿ ಸಲ್ಲಿಸುತ್ತೇವೆ. ದರ ಇಳಿಕೆ ಮಾಡುವವರೆಗೂ ಪ್ರತಿಭಟನೆ ಮಾಡ್ತೇವೆ ಎಂದು ಆಟೋರಿಕ್ಷಾ ಸಂಘಟನೆಯವರು ಒತ್ತಾಯಿಸಿದ್ರು.ಕಳೆದ ವರ್ಷ 500ರ ಆಸುಪಾಸಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಈಗ 900ರ ಗಡಿಯತ್ತ ಬಂದು ನಿಂತಿದೆ.      ಜನಸಾಮಾನ್ಯರಿಗೆ ಅತಿಮುಖ್ಯವಾಗಿ ಬೇಕಾದ ಅಡಿಗೆ ಅನಿಲದ ಬೆಲೆ ದಿನೇ ದಿನೇ ಹೆಚ್ಚಳ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ  ಜನಸಾಮಾನ್ಯರು ಅಸಮಾಧಾನ ಹೊರಹಾಕುತ್ತಿದ್ದಾರೆ. 
 
ಇನ್ನು  ಗ್ಯಾಸ್ ಸಿಲಿಂಡರ್ ಬೆಲೆ ಯಾವಗ್ಲಿಂದ ಏರಿಕೆ ಆಯ್ತು ಅಂತಾ ನೋಡುವುದಾದ್ರೆ ....
 
ಫೆಬ್ರವರಿ ತಿಂಗಳಲ್ಲೇ ಮೂರು ಬಾರಿ ಸಿಲಿಂಡರ್ ದರ ಹೆಚ್ಚಳ
 
ಫೆಬ್ರವರಿಯಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ 125 ರೂ ಹೆಚ್ಚಳ
 
ಕಳೆದ ಮಾರ್ಚ್ ತಿಂಗಳು 50 ರೂ ಏರಿಕೆಯಾಗಿದ್ದ ಸಿಲಿಂಡರ್ ಬೆಲೆ
 
ಏಪ್ರಿಲ್ ತಿಂಗಳಲ್ಲಿ 25 ರೂ ಬೆಲೆ ಹೆಚ್ಚಳ
 
ಜುಲೈ ತಿಂಗಳಲ್ಲಿ 25 ರೂ ಹೆಚ್ಚಳ
 
ಆಗಸ್ಟ್ ಮೊದಲ ವಾರದಲ್ಲಿ 25 ರೂ ಹೆಚ್ಚಳ
 
ಆಗಸ್ಟ್ 3 ನೇ ವಾರದಲ್ಲಿ ಮತ್ತೆ 25ರೂ ಹೆಚ್ಚಳ 
 
ಒಟ್ನಲ್ಲಿ ದರ ಏರಿಕೆಯಿಂದ ಬೇಸತ್ತ ಜನಸಾಮಾನ್ಯರು ಕೇಂದ್ರ ಸರ್ಕಾರಕ್ಕೆ  ಹಿಡಿಶಾಪ ಹಾಕಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನಾದ್ರು ಸರ್ಕಾರ ಎಚ್ಚೇತ್ತುಕೊಂಡು ಕೊರೋನಾ ಹೊಡೆತದಿಂದ ತತ್ತರಿಸಿರುವ ಜನತೆಗೆ ಗಾಯದ ಮೇಲೆ ಬರೆ ಎಳೆಯದೆ ಬೆಲೆ ಇಳಿಕೆ ಮಾಡುತ್ತಾ? ಎಂಬುದನ್ನ ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ