ಶಾಸಕನಾಗಿದ್ದಾಗಲೂ ಪ್ರತಿ ದಿನ ನನಗೆ ಸವಾಲಾಗಿತ್ತು. ಹಟ್ಟಿನಿಂದಲೇ ಯಾರು ಎಲ್ಲವನ್ನು ಕಲಿತು ಬಂದಿರಲ್ಲ, ನಾನು ಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
ಮಂತ್ರಿ ಸ್ಥಾನ ದೊರೆಯುವುದಕ್ಕೆ ದೇವರ ಆಶೀರ್ವಾದ, ಪಕ್ಷದ ಮುಖಂಡರ ಸಹಕಾರವಿದೆ. ಬೇರೆ ಬೇರೆ ಕಾರಣಗಳಿಂದ ಕಾಲ ಕೂಡಿ ಬಂದಿರಲಿಲ್ಲ ಅಷ್ಟೇ. ಸಚಿವನಾಗುವುದನ್ನೂ ಈ ಹಿಂದೆ ಯಾರೂ ತಪ್ಪಿಸಲ್ಲ, ಮುಂದೆಯೂ ಯಾರಿಂದಲೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದರು.
ಇನ್ನೂ ಇದೇ ವೇಳೆ ಮಾತನಾಡಿದ ಅವರು ಈ ಹಿಂದೆ ಆಗಿರುವುದರ ಕುರಿತು ನಾನು ಚಿಂತೆ ಮಾಡುವುದಿಲ್ಲ. ಖಾತೆಯ ಬಗ್ಗೆ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ರಾಜ್ಯದ ಜನತೆಗೆ ಉತ್ತಮ ಕೆಲಸ ಮಾಡಿ ತೋರಿಸುವೆ. ಮುಂದೆ ಆಗಬೇಕಾಗಿರುವುದರ ಬಗ್ಗೆ ಯೋಚನೆ ಮಾಡುತ್ತೇನೆ ,ಯಾವ ಖಾತೆ ಕೊಟ್ಟರು ಸಮರ್ಥವಾಗಿ ನಿರ್ಹಹಿಸುತ್ತೇನೆ ಎಂದು ಶಾಸಕ ಎಂ.ಕೃಷ್ಣಪ್ಪ ತಿಳಿಸಿದರು.