ಮೆಕಾಲೆಯ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು: ನಾಗೇಶ್
ವಿದ್ಯಾರ್ಥಿ ತಾನು ಬಯಸಿದ್ದನ್ನು ಕಲಿಯುವ ಪದ್ಧತಿಯೇ ಎನ್ಇಪಿ ಪದ್ಧತಿ. ಮೆಕಾಲೆ ಶಿಕ್ಷಣದಿಂದ ಎಲ್ಲರನ್ನು ಒಂದು ಮಾಡುತ್ತೇವೆ ಎಂದು ಹೊರಟ ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯಿಂದ ಗುಲಾಮಗಿರಿಗೆ ದೂಡಿದರು. ಆದರೆ ವ್ಯಕ್ತಿಯನ್ನು ಗುಲಾಮಗಿರಿಯಿಂದ ಹೊರತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರಮಿಸಿದೆ.
ಪ್ರತಿ ವ್ಯಕ್ತಿಯಲ್ಲಿ ವ್ಯಕ್ತಿತ್ವ ರೂಪುಗೊಳ್ಳಲು ಎನ್ಇಪಿ ಬೇಕು. ಅದಕ್ಕಾಗಿ ಪ್ರಧಾನಿ ಮೋದಿ ಅವರ ಆಶಯದಂತೆ ಈ ವರ್ಷ ಎನ್ಇಪಿ ಜಾರಿ ಬಂದಿದೆ ಎಂದು ತಿಳಿಸಿದರು.