ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹಾ ಘಟಬಂಧನ್..!

ಸೋಮವಾರ, 17 ಜುಲೈ 2023 (20:40 IST)
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು ಕಾಂಗ್ರೆಸ್‌ ಪಕ್ಷ ರಣತಂತ್ರ ರೂಪಿಸುತ್ತಿದೆ.ಈ ಹಿನ್ನೆಲೆ ಪ್ರತಿಪಕ್ಷಗಳ ಸಭೆಯನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡಿದೆ.ಸುಮಾರು 24 ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಈಗಾಗಲೇ ಕೆಲವು ಪಕ್ಷದ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ.ಎಐಸಿಸಿ ಮಾಜಿ ಅಧ್ಯಕ್ಷೇ ಸೋನಿಯಾ ಗಾಂಧಿ,ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇನ್ನೂ ಮುಂದಿನ ಲೋಕಸಭೆ ಚುನಾವಣೆಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತಿರುವ ‘ಮೋದಿ ವಿರೋಧಿ’ ಪ್ರತಿಪಕ್ಷಗಳು ಒಟ್ಟಾಗುತ್ತಿವೆ. ಸಭೆಯಲ್ಲಿ ಮೈತ್ರಿಕೂಟದ ಹೆಸರು ಏನಿರಬೇಕು? ಕೂಟದ ಅಜೆಂಡಾ ಏನು? ರಾಜ್ಯವಾರು ಮೈತ್ರಿ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಜತೆಗೆ, ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ನಿಟ್ಟಿನಲ್ಲಿ ತಮ್ಮೊಳಗಿರುವ ಭಿನ್ನಮತವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೂ ವಿರೋಧ ಪಕ್ಷಗಳ ಸಭೆಯಲ್ಲಿ ಪ್ರಯತ್ನ ನಡೆಯಲಿದೆ.
ಮಹಾಘಟಬಂಧನ್ ಸಭೆಯ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ಮಾತನಾಡಿ ಬೆಂಗಳೂರಿನ ಪ್ರತಿಪಕ್ಷಗಳ ಸಭೆ ನಡೆಯುತ್ತಿದೆ. ಜೂನ್ ೨೩ ರಂದು ಪಾಟ್ನಾದಲ್ಲಿ ನಡೆದಿತ್ತು.ಇದೀಗ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ.ನಾಳೆ ಬೆಳಗ್ಗೆ ೧೧ ಗಂಟೆಗೆ ಸಭೆ ಪ್ರಾರಂಭ ಆಗುತ್ತದೆ.ಇಂದು ಸಂಜೆ ಸಿಎಂ ಡಿನ್ನರ್ ಪಾರ್ಟಿ ಇಟ್ಟುಕೊಂಡಿದ್ದಾರೆ.ಬಿಜೆಪಿ ಪ್ರತಿಪಕ್ಷಗಳ ಧ್ವನಿಯನ್ನ ಅಡಗಿಸುತ್ತಿದೆ.ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ತಿದೆ. ಐಟಿ,ಇಡಿ,ಸಿಬಿಐ ಎಲ್ಲ ದುರ್ಬಳಕೆ ಮಾಡಿಕೊಳ್ತಿದೆ. ಮಣಿಪುರದಲ್ಲಿ ಹಿಂಚಾರ ನಡೆದಿದೆ.ಕಳೆದ ೭೫ ದಿನಗಳಿಂದ ಅಲ್ಲಿ ಹಿಂಸಾಚಾರ ನಡೆದಿದೆ.ಆದರೂ ಪ್ರಧಾನಿಯವರು ಬಾಯಿ ತೆರೆದು ಮಾಡ್ತಿಲ್ಲ.ಇದು ನಿಜಕ್ಕೂ ನಮಗೆಲ್ಲ ಶಾಕಿಂಗ್ ಸಂಗತಿ.ಬಿಜೆಪಿ ಮನಸ್ಥಿತಿ ಏನು‌ ಅನ್ನೋದನ್ನ ಇದು ತೋರಿಸ್ತಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ