ಬಿ.ಎಸ್.ಯಡಿಯೂರಪ್ಪ ವಚನಭ್ರಷ್ಟ: ಮಹಾದಾಯಿ ಪ್ರತಿಭಟನಾಕಾರರು

ಮಂಗಳವಾರ, 26 ಡಿಸೆಂಬರ್ 2017 (19:11 IST)
ಕಳೆದ ನಾಲ್ಕು ದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆಗಾಗಿ ಕಾದಿದ್ದ ಮಹದಾಯಿ ಪ್ರತಿಭಟನಾನಿರತ ರೈತರಿಗೆ ಕೊನೆಗೂ ಸಂಧಾನ ಸಫಲವಾಗದೆ ನಿರಾಶೆಯಾಗಿದೆ.
ಮಹದಾಯಿ ಹಾಗೂ ಕಳಸಾ ಬಂಡೂರಿ ಯೊಜನೆ ಜಾರಿಗೆ ಒತ್ತಾಯಿಸಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯ ಮುಂದೆ ಎದುರು ರೈತರು ನಡೆಸುತ್ತಿರುವ ಆಹೋರಾತ್ರಿ ಧರಣಿ ಮಂಗಳವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
 
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಹನುಮಂತಪ್ಪ ತೀವ್ರ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲ ರೈತರು ಕೂಡಾ ಅಸ್ವಸ್ಥರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಮಹದಾಯಿ ಹೋರಾಟಗಾರರನ್ನು ಯಡಿಯೂರಪ್ಪ ಇಂದು ಸಂಜೆ ಭೇಟಿ ಮಾಡಿ ರೈತರಿಗೆ ಮನವಿ ಮಾಡಿದರು. ಆದರೆ. ಬಿಎಸ್‌ವೈ ಮನವಿಗೆ ರೈತರು ಆಕ್ರೋಶ ವ್ಯಕ್ತಪಡಿಸಿ ವಚನ ಭ್ರಷ್ಟ ಎಂದು ಕಿಡಿಕಾರಿದರು. 
 
ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಬೇಕಾಗಿದ್ದ ಕೋರ್ ಕಮಿಟಿ ಸಭೆಯನ್ನು ಕೂಡಾ ಮಹದಾಯಿ ಹೋರಾಟಗಾರರ ಪ್ರತಿಭಟನೆಯಿಂದಾಗಿ ಯಡಿಯೂರಪ್ಪ ನಿವಾಸಕ್ಕೆ ವರ್ಗಾಯಿಸಲಾಗಿತ್ತು. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಂದು ರೈತ ಮುಖಂಡ ವಿರೇಶ್ ಸೊಬರದ್ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ