ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲ ಹೊಗಲಾಡಿಸಲು ಸರಳ ವಿಧಾನ

ನಾಗಶ್ರೀ ಭಟ್

ಮಂಗಳವಾರ, 26 ಡಿಸೆಂಬರ್ 2017 (16:26 IST)
ಇಂದಿನ ಯುವತಿಯರಿಗೆ ಕಪ್ಪು ವರ್ತುಲ ಒಂದು ಅತಿ ದೊಡ್ಡ ಸಮಸ್ಯೆಯಾಗಿದೆ. ಎಷ್ಟೇ ಸುಂದರವಾಗಿದ್ದರೂ ಕಣ್ಣಿನ ಸುತ್ತಲಿರುವ ಇದು ಕಪ್ಪು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಅದರಿಂದ ಮುಕ್ತಿ ಪಡೆಯಲು ಕ್ರೀಂಗಳ ಮೊರೆ ಹೋಗದೆ ನೀವು ಮನೆಯಲ್ಲಿಯೇ ಕೆಲವು ಔಷಧಗಳನ್ನು ಮಾಡಿಕೊಳ್ಳಬಹುದು. ಹೇಗೆ ಮತ್ತು ಯಾವುದು ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
* ಸೌತೇಕಾಯಿಯನ್ನು ಸ್ಲೈಸ್ ಮಾಡಿ ಅದನ್ನು ಕಣ್ಣಿನ ಮೇಲೆ 10-15 ನಿಮಿಷ ಇಟ್ಟುಕೊಳ್ಳಿ. ಇದು ನಿಮ್ಮ ಕಣ್ಣನ್ನು ತಂಪು ಮಾಡುತ್ತದೆ ಮತ್ತು ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ತೆಗೆಯುತ್ತದೆ.
 
* ಟೊಮೆಟೋ ಪಲ್ಪ್ 1 ಚಮಚ, ಜೇನು 1/2 ಚಮಚ, ಅರಿಶಿಣ 1/2 ಚಮಚ ಮತ್ತು 1 ಚಮಚ ಕಡಲೆಹಿಟ್ಟನ್ನು ಸೇರಿಸಿ ಪೇಸ್ಟ್ ಮಾಡಿ. ಅದನ್ನು ಕಣ್ಣಿನ ಸುತ್ತಲೂ ಹಚ್ಚಿ 15-20 ನಿಮಿಷ ಬಿಟ್ಟು ತೊಳೆದರೆ ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ತೆಗೆಯುತ್ತದೆ. ಉತ್ತಮ ಪರಿಣಾಮಕ್ಕಾಗಿ ಒಂದು ವಾರ ದಿನವೂ ಮಾಡಿ ನೋಡಿ.
 
* ದಿನವೂ ಮಲಗುವ ಮೊದಲು ಬಾದಾಮಿ ಎಣ್ಣೆಗೆ ನಿಂಬೆರಸವನ್ನು ಸೇರಿಸಿ ಕಣ್ಣಿನ ಸೂತ್ತಲೂ ಹಚ್ಚಿಕೊಂಡು ಮಲಗಿದರೆ ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ತೆಗೆಯುತ್ತದೆ.
 
* ದಿನವೂ ಕಣ್ಣಿನ ಸುತ್ತಲೂ ರೋಸ್ ವಾಟರ್ ಅನ್ನು ಹಚ್ಚಿ 15-20 ನಿಮಿಷ ಬಿಟ್ಟು ತೊಳೆದರೆ ಕಪ್ಪು ವರ್ತುಲ ಮಾಯವಾಗುತ್ತದೆ.
 
* ಸೌತೇಕಾಯಿಯ ರಸವನ್ನು ತೆಗೆದು ಅದರಲ್ಲಿ ಹತ್ತಿಯ ಬಾಲ್ ಅನ್ನು ಅದ್ದಿ ಅದನ್ನು ಕಣ್ಣಿನ ಸುತ್ತಲೂ ಕಪ್ಪಾದ ಜಾಗದ ಮೇಲೆ 20 ನಿಮಿಷ ಇರಿಸಿ. ಇದನ್ನು 3-4 ದಿನಗಳು ಮಾಡುತ್ತಾ ಬಂದರೆ ನಿಮಗೆ ಅದರ ಪರಿಣಾಮ ತಿಳಿಯುತ್ತದೆ.
 
* ಕೋಲ್ಡ್ ವಾಟರ್‌ನಲ್ಲಿ ಅದ್ದಿದ ಹತ್ತಿಯ ಬಾಲ್‌ಗಳನ್ನು 10-15 ನಿಮಿಷಗಳ ಕಾಲ ಕಣ್ಣಿನ ಸುತ್ತಲೂ ಇಡುತ್ತಾ ಬಂದರೆ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಕ್ರಮೇಣ ಮರೆಯಾಗುತ್ತದೆ.
 
ಈ ಸರಳ ಉಪಾಯಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ