Mahalakshmi Murder Case: ಹತ್ಯೆ ಹಿಂದಿನ ಕಾರಣ ಬಯಲು

Sampriya

ಗುರುವಾರ, 26 ಸೆಪ್ಟಂಬರ್ 2024 (18:40 IST)
ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ನಡೆದ ಭೀಕರ ಮಹಾಲಕ್ಷ್ಮಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟದತ್ತ ತಲುಪಿದೆ. ಪ್ರಕರಣ ಹಂತಕ ರಂಜನ್ ಕೂಡಾ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಡೆತ್‌ನೋಟ್‌ನಲ್ಲಿ ಹತ್ಯೆಗೆ ಕಾರಣ ಹಾಗೂ ಮಹಾಲಕ್ಷ್ಮೀ ಜತೆಗಿದ್ದ ಸಂಬಂಧದ ಬಗ್ಗೆ ರಂಜಾನ್ ಉಲ್ಲೇಖಿಸಿದ್ದಾನೆ.

ಪೊಲೀಸರ ತನಿಖೆ ವೇಳೆ ರಂಜನ್ ಹಾಗೂ ಮಹಾಲಕ್ಷ್ಮೀ ಒಂದೇ ಶೋರೂಂನಲ್ಲಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ. ಶೋ ರೂಂನಲ್ಲಿ ಪರಿಚಯವಾದ ಇವರಿಬ್ಬರಲ್ಲಿ ಸ್ನೇಹವಾಗಿ ನಂತರ ಕೆಲ ದಿನಗಳಿಂದ ಸಂಬಂಧ ಹೊಂದಿದ್ದರು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 2 ರಂದು, ತನ್ನ ವಾರದ ರಜೆಯನ್ನು ಹೊಂದಿದ್ದ ಮಹಾಲಕ್ಷ್ಮಿ, ಪ್ರತಿ ದಿನದಂತೆ ಮುಕ್ತಿ ರಂಜನ್ ರಾಯ್‌ನನ್ನು ಭೇಟಿಯಾಗುತ್ತಿದ್ದಳು. ಇನ್ನೂ ಭೇಟಿ ಸಂದರ್ಭ ತನ್ನನ್ನು ಮದುವೆಯಾಗುವಂತೆ ರಂಜಾನ್‌ಗೆ ಒತ್ತಾಯಿಸಿದ್ದಾಳೆ. ಮಾತು ಅತಿರೇಖಕ್ಕೆ ತಿರುಗಿ, ಮಹಾಲಕ್ಷ್ಮಿ ರಂಜನ್ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಕೋಪಗೊಂಡ ರಂಜನ್ ಆಕೆಯನ್ನು ಉಸಿರುಗಟ್ಟಿಸಿ ಕೊಂದು, ನಂತರ ಆಕೆಯ ದೇಹವನ್ನು ತುಂಡರಿಸಿ, ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿ ಇಟ್ಟಿದ್ದಾನೆ.

ಇನ್ನೂ ದೂರವಾಗಿರುವ ಪತಿಯೂ ಈ ಹಿಂದೆ ಮಹಾಲಕ್ಷ್ಮೀ ಮೇಲೆ ದೂರನ್ನು ನೀಡಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಮಹಾಲಕ್ಷ್ಮೀ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಆಕೆಯ ಪತಿ ಹೇಮಂತ್ ದೂರನ್ನು ನೀಡಿದ್ದರು.

ಕಳೆದ 9 ತಿಂಗಳಿನಿಂದ ಮಹಾಲಕ್ಷ್ಮಿ ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ವಾಸವಾಗಿದ್ದಳು. ಇನ್ನು ಹತ್ಯೆ ಪ್ರಕರಣ ಆಕೆಯ ಪತಿ ಹೇಮಂತ್ ಅವರು ಅಶ್ರಫ್ ಎಂಬಾತನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಮಹಾಲಕ್ಷ್ಮೀ ಈ ಹಿಂದೆ ಅಶ್ರಫ್ ಜತೆ ಒಡನಾಟದಲ್ಲಿದ್ದರು. ಈ ವಿಚಾರವಾಗಿ ಈ ಹಿಂದೆ ನಾನು ದೂರನ್ನು ನೀಡಿದ್ದೆ ಎಂದರು.

ಅಶ್ರಫ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಕಳೆದ ಒಂದು ವರ್ಷದಿಂದ ಆಕೆಯ ಸಂಪರ್ಕದಿಂದ ದೂರವಾಗಿರುವುದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ