Mahalakshmi Murder Case: ಡೆತ್‌ನೋಟ್‌ನಲ್ಲಿ ಕೊಲೆ ರಹಸ್ಯ ಬಿಟ್ಟಿಟ್ಟ ಆರೋಪಿ

Sampriya

ಗುರುವಾರ, 26 ಸೆಪ್ಟಂಬರ್ 2024 (16:38 IST)
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಮಹಾಲಕ್ಷ್ಮೀ ಹತ್ಯೆ ಪ್ರಕರಣ ಆರೋಪಿ  ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಈಗಾಗಲೇ ಬೆಳಕಿಗೆ ಬಂದಿದೆ. ಕೊಲೆ ಆರೋಪಿ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮುನ್ನಾ ಮಹಾಲಕ್ಷ್ಮೀ ಕೊಲೆಗೆ ಕಾರಣವನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ.

ಡೆತ್‌ನೋಟ್‌ನಲ್ಲಿ ಸೆಪ್ಟೆಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿರುವುದಾಗಿ ರಂಜನ್ ರಾಯ್ ಉಲ್ಲೇಖಿಸಿದ್ದಾನೆ. ವೈಯ್ಯಕ್ತಿಕ ವಿಚಾರ ಸಲುವಾಗಿ ಆಕೆ ಜತೆ ಜಗಳವಾಗಿದೆ. ಈ ಸಂದರ್ಭದಲ್ಲಿ ಆಕೆ ಮೊದಲು ಹಲ್ಲೆಗೆ ಮುಂದಾಗಿದ್ದಾಳೆ. ಇದರಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಬರೆದಿದ್ದಾನೆ.  

ನಂತರ ಬಾತ್‌ರೂಂನಲ್ಲಿ ಆ್ಯಕ್ಸಲ್ ಬ್ಲೇಡ್‌ನಿಂದ ಆಕೆಯ ದೇಹವನ್ನು 53ಪೀಸ್‌ಗಳಾಗಿ ತುಂಡು ಮಾಡಿದ್ದೇನೆ. ಸಾಕ್ಷ್ಯ ನಾಶಕ್ಕಾಗಿ  ಬಾತ್ ರೂಂನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾನೆ.

ಪ್ರಾಥಮಿಕವಾಗಿ ಮೂವರನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದ್ದರು.  ಆದರೆ ಇದರ ಹಂತಕ ಒಡಿಶಾದಲ್ಲಿ ತಲೆಮರೆಸಿಕೊಂಡಿರುವುದಾಗಿ ಪ್ರಮುಖ ಮಾಹಿತಿ ಸಿಕ್ಕಿದೆ. ಆರೋಪಿ ರಂಜನ್ ಹಾಗೂ ಮಹಾಲಕ್ಷ್ಮೀ ಒಂದೇ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಂಜನ್ ಶೋರೂಂನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.

ಇನ್ನೂ ಮಹಾಲಕ್ಷ್ಮೀ ಕೊಲೆಯಾದ ದಿನದಂದು ಈತ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವುದು ಪೊಲೀಸರಿಗೆ ತನಿಖೆ ವೇಳೆ ಮಾಹಿತಿ ಸಿಕ್ಕಿದೆ. ಕಾಲ್ ಡೀಟೆಲ್ಸ್‌ನಲ್ಲಿ ಮಹಾಲಕ್ಷ್ಮೀ ಜತೆ ರಂಜನೆ ಪದೇ ಪದೇ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಇದರ ಆಧಾರ ಮೇಲೆ ಪೊಲೀಸರು ಆರೋಪಿಯ ಪತ್ತೆಗೆ ತೆರಳಿದಾಗ ಆತ ಕೂಡಾ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.  

ಒಡಿಸಾದ ಭೂನಿಪುರ ಎಂಬ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಬಗ್ಗೆ ದುಸೂರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ