ಮಹಾರಾಷ್ಟ್ರ ಸಿಎಂ ಕಿವಿ ಊದಿದ ನಾಡದ್ರೋಹಿಗಳು…!

ಮಂಗಳವಾರ, 5 ಮಾರ್ಚ್ 2019 (14:57 IST)
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಂತೆ ಮತ್ತೆ ನಾಡದ್ರೋಹಿಗಳು ಮಹಾರಾಷ್ಟ್ರ ಮುಖ್ಯಮಂತ್ರಿಯ ಕಿವಿ ಊದುವ ಕೆಲಸ ಶುರುವಿಟ್ಟುಕೊಂಡಿದ್ದಾರೆ.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಎಂ ಇ ಎಸ್ ಮತ್ತೆ ಗಡಿ ಕ್ಯಾತೆ ತೆಗೆಯುತ್ತಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ ನಾಡದ್ರೋಹಿ ಎಂ ಇ ಎಸ್ ನಿಯೋಗವು ಗಡಿ ಕ್ಯಾತೆಗೆ ಕೈ ಹಾಕಿದೆ. ಎಂ ಇ ಎಸ್ ಮಾಜಿ  ಶಾಸಕ ಅರವಿಂದ ಪಾಟೀಲ ನೇತೃತ್ವದ ನಿಯೋಗದಲ್ಲಿ ಕರ್ನಾಟಕ ಸರಕಾರ ಗಡಿ ಭಾಗದ ಮರಾಠಿ ಭಾಷಿಕರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಗಡಿ ಭಾಗದಲ್ಲಿ ಒತ್ತಾಯ ಪೂರ್ವಕ ಕನ್ನಡ ಹೇರಿಕೆಯಾಗುತ್ತಿದೆ ಎನ್ನುವ ಪೊಳ್ಳು ಆರೋಪ ಮಾಡುವುದನ್ನು ಮುಂದುವರಿಸಿದ್ದಾರೆ.

ಸುಪ್ರೀಂ ನಲ್ಲಿ ಪ್ರಕರಣ ಇರುವಾಗ ಕರ್ನಾಟಕ ಸರಕಾರ ಎಂ ಇ ಎಸ್ ಜನಪ್ರತಿನಿಧಿಗಳ ಸದಸ್ಯತ್ವ ರದ್ದು ಮಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಮಹಾರಾಷ್ಟ್ರ ಸಿಎಂ ಕಿವಿ ಊದಿ ಬಂದ ನಾಡದ್ರೋಹಿಗಳ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ