ಮಹೇಶ್ ಕುಮಠಳ್ಳಿ ಒಬ್ಬ ರೋಬೊಟ್ – ರಿಮೋಟ್ ಇರೋದು ಎಲ್ಲಿ?

ಬುಧವಾರ, 27 ನವೆಂಬರ್ 2019 (19:11 IST)
ಅನರ್ಹ ಶಾಸಕ ಹಾಗೂ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿರುದ್ಧ ಮಾಜಿ ಗೃಹ ಸಚಿವ ಲೇವಡಿ ಮಾಡಿದ್ದಾರೆ.

ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಪ್ರವಾಹದಲ್ಲಿ ಓಡಾಡಿ ಕೆಲಸ  ಮಾಡಿದ್ದಾನೆ. ಮುಂದಿನ ಚುನಾವಣೆಯಲ್ಲಿ ಆತ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರ್ತಾನೆ. ಹೀಗಂತ ಎಂ. ಬಿ. ಪಾಟೀಲ ಹೇಳಿದ್ದಾರೆ.
 

ಡಿಸಿಎಂ, ಶಾಸಕ ಅಥಣಿಯವರೇ ಆದ್ರೂ ಸಂತ್ರಸ್ತರಿಗೆ ಕನಿಷ್ಟ 10 ಸಾವಿರ ಹಣ ಬಂದಿಲ್ಲ. ಮಹೇಶ ಕುಮಠಳ್ಳಿ ರಿಮೋಟ್ ಕಂಟ್ರೋಲ್ ಗೋಕಾಕ್ ನಲ್ಲಿತ್ತು. ಅಲ್ಲಿ ಲೆಪ್ಟ್ ಹೊಡೆದರೇ ಲೆಪ್ಟ್, ರೈಟ್ ಹೊಡೆದರೇ ರೈಟ್ ತಿರುಗುತ್ತಿದೆ ಅಂತ ಪರೋಕ್ಷವಾಗಿ ರಮೇಶ ಜಾರಕಿಹೊಳಿಗೆ ಎಂಬಿಪಿ ಲೇವಡಿ ಮಾಡಿದ್ದಾರೆ.

ಯಾರ ರಿಮೋಟ್ ಕಂಟ್ರೋಲ್ ನಲ್ಲಿ ಇರಬೇಡ ಅಂತಾ ಗಜಾನನ ಮಂಗಸೂಳಿಗೆ ಹೇಳಿದ್ದೀನಿ ಎಂದ ಎಂಬಿಪಿ,
ಡಿಸಿಎಂ ಸವದಿ ಬಗ್ಗೆ ನನಗೆ ಮರುಕವಿದೆ. ಲಕ್ಷ್ಮಣ ಸವದಿ- ಕುಮಠಳ್ಳಿಯನ್ನ ರಥದಲ್ಲಿ ಇಟ್ಟುಕೊಂಡು ಮೆರೆಸುತ್ತಿದ್ದಾನೆ.
ನಾನಾಗಿದ್ದರೇ ಆ ರಥವನ್ನ ಓಯ್ದು ಹೊಳೆಯಲ್ಲಿ ಬಿಡ್ತಿದ್ದೆ ಅಂತ ವ್ಯಂಗ್ಯವಾಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ