ನಾಳೆ ಬಂದ್‌ನಲ್ಲಿ ಶಾಂತಿ ಕದಡಿದರೆ ವಾಟರ್ ಜೆಟ್ ಪ್ರಯೋಗ: ಪೊಲೀಸ್ ಆಯುಕ್ತ ಮೇಘರಿಕ್
ಗುರುವಾರ, 8 ಸೆಪ್ಟಂಬರ್ 2016 (16:11 IST)
ನಾಳೆ ಶಾಂತಿಯುತವಾಗಿ ಬಂದ್ ಮಾಡಬೇಕು, ಶಾಂತಿ ಕದಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಮೇಘರಿಕ್ ಎಚ್ಚರಿಕೆ ನೀಡಿದ್ದಾರೆ. ಶಾಂತಿ ಕದಡುವ ಜನರ ವಿರುದ್ಧ ವಾಟರ್ ಜೆಟ್ ಪ್ರಯೋಗಿಸಲಾಗುತ್ತದೆ ಎಂದು ಮೇಘರಿಕ್ ಹೇಳಿದರು.
ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗುತ್ತದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಬಂದೋಬಸ್ತ್ ಮಾಡಲಾಗುತ್ತದೆ ಎಂದು ನುಡಿದರು. ನಾಳೆ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸಭೆ ಕರೆದಿದ್ದು, ಟ್ರಾವಲ್ ಮಾಲೀಕರು ಬಂದ್‌ಗೆ ಸಹಕರಿಸುವುದಾಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.
ಬೆಳಿಗ್ಗೆ 6 ಗಂಟೆಗೆ ಮುಂಚಿತವಾಗಿ ಮತ್ತು 6 ಗಂಟೆಯ ನಂತರ ಮಾತ್ರ ಸೇವೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. ಟೌನ್‌ಹಾಲ್ ಮುಂದುಗಡೆ ವಾಟಾಳ್ ಕರೆದಿರುವ ಪ್ರತಿಭಟನೆಯಲ್ಲಿ ನಾವು ಕೂಡ ಭಾಗವಹಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ನಾಳೆ ಬೆಂಗಳೂರಿನ ವಾಣಿಜ್ಯ ಮಳಿಗೆಗಳು ಮತ್ತು ಮಾಲ್‌ಗಳು ಬಂದ್ ಆಗಲಿವೆ. ನಾಳೆ ಬಂದ್ ವೇಳೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಅಡ್ಡಿಯಾಗುವ ಸಂಭವವಿದೆ. ಮೆಟ್ರೋ ರೈಲು ಸಂಚಾರಕ್ಕೆ ಕಾದುನೋಡುವ ತಂತ್ರವನ್ನು ಅನುಸರಿಸಲು ಬಿಎಂಆರ್‌ಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ಡೌನ್‍ಲೋಡ್ ಮಾಡಿಕೊಳ್ಳಿ