Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ನಮ್ಮ ನಾಯಕರು ರಾಜೀನಾಮೆ ಕೊಡಬೇಕಾಗಿಲ್ಲ ಎಂದಿದ್ದಾರೆ. ಯಾವುದೋ ಒಂದು ಘಟನೆಯನ್ನು ಉದ್ದೇಶಪೂರ್ವಕವಾಗಿ ಮಾಡಿದ್ರೆ ಅದು ತಪ್ಪು. ಇದು ಆಕಸ್ಮಿಕವಾಗಿ ನಡೆದಿದೆ. ಅದಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ.
ಹಿಂದೆ ಕುಂಬಮೇಳದಲ್ಲಿ ಸಾಕಷ್ಟು ಜನ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಅವರು ರಾಜೀನಾಮೆ ಕೊಟ್ರಾ? ನಾನು ಹೇಳಿದಾಗ ನನ್ನನ್ನೇ ಬೈದರು. ನಾವು ಕೆಸರು ಎರಚುವ ಕೆಲಸ ಮಾಡಕ್ಕೆ ಹೋಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.