ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಹಲವು ಬಿಜೆಪಿ ನಾಯಕರು ಮತ್ತು ಜೆಎಸ್ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ. ದೇವೇಗೌಡ, ಮಾಜಿ ಸಿ.ಎಂ. ಹೆಚ್. ಡಿ. ಕುಮಾರಸ್ವಾಮಿ ಅವರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡೋದ್ರಲ್ಲಿ ತಪ್ಪೇನಿದೆ....? ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ..
ಕಲಬುರಗಿಯ ತಮ್ಮ ಪಕ್ಷದ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಅಲ್ಲಿಯ ಜನರು ಸಿಎಂ ಮೇಲೆ ಒತ್ತಡ ಹೇರಿದ ಹಿನ್ನಲೆ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದ್ದಾರೆ ವಿನಹಃ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಿವಿ ಎಂದಲ್ಲ ಎಂದ್ರು.
ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ನಡೆದುಕೊಂಡಿಲ್ಲ. ಸಂವಿಧಾನ ಬದಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಸದನದಲ್ಲಿ ಲೋಕಪಾಲ್ ಬಿಲ್, ಪಂಜಾಬ್ ಬ್ಯಾಂಕ್ ಹಗರಣಗಳು, ದಲಿತರ ಮೇಲಿನ ದೌರ್ಜನ್ಯಗಳು ಸೇರಿ ಹಲವು ಮಹತ್ವದ ವಿಷಯಗಳ ಚೆರ್ಚೆ ನಡೆಯಬೇಕಿತ್ತು. ಆದ್ರೆ ಅದಕ್ಕೆ ಬಿಜೆಪಿಯವರು ಅವಕಾಶ ನೀಡಲಿಲ್ಲ. ಇನ್ನು ಜೈಲಿಗೆ ಹೋಗಿ ಬಂದವರನ್ನು ತಮ್ಮ ಜೊತೆಯಲ್ಲಿಯೇ ಇಟ್ಟುಕೊಂಡು ಹೋಗ್ತಿರೋ ಪ್ರಧಾನಿ ಮೋದಿ, ಅಮಿತ್ ಶಾ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಚೋರ್ ಉಲ್ಟಾ ಕೋತ್ವಾಲಕೂ ಡಾಟೆ ಎನ್ನುವಂತಾಗಿದೆ. ನಮ್ಮ ಹತ್ತಿರ ಜೈಲಿಗೆ ಹೋಗಿ ಬಂದವರು ಇದ್ದರೆ ತೋರಿಸಿ ನೋಡ್ತಿನಿ ಎಂದು ಪ್ರಶ್ನೆ ಮಾಡಿದ್ರು. ಇನ್ನು ನಾಳೆಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೋಸ್ಟಲ್ ಏರಿಯಾದಲ್ಲಿ ಪ್ರವಾಸ ಮಾಡಿ ಮತಯಾಚನೆ ಮಾಡಲಿದ್ದಾರೆ ಎಂದು ಖರ್ಗೆ ಹೇಳಿದ್ರು.