ವೆಂಕಯ್ಯ ನಾಯ್ಡು ಮಂಗಳೂರು ನಲ್ಲಿ ವಾಸ್ತವ್ಯ ಮಾಡುತ್ತಿರುವುದು ಯಾಕೆ?ಕಾಂಗ್ರೆಸ್ ಕಿಡಿ

ಗುರುವಾರ, 26 ಏಪ್ರಿಲ್ 2018 (17:32 IST)
ಉಪ ರಾಷ್ಟ್ರಪತಿ  ವೆಂಕಯ್ಯ  ನಾಯ್ಡು ಏಪ್ರಿಲ್ 29 ರಂದು ಹಾಗೂ 30 ರಂದು ಮಂಗಳೂರು ನಲ್ಲಿ  ವಾಸ್ತವ್ಯ ಮಾಡಲಿದ್ದಾರೆ. ಕೇರಳದಲ್ಲಿ  ಕಾರ್ಯಕ್ರಮವಿದ್ದರೂ  ವೆಂಕಯ್ಯ ನಾಯ್ಡು ಮಂಗಳೂರು ನಲ್ಲಿ ವಾಸ್ತವ್ಯ ಮಾಡುತ್ತಿರುವುದು ಯಾಕೆ ಎಂಬುದರ ಬಗ್ಗೆ ಚರ್ಚೆ ನಡಿಯುತ್ತಿದೆ. 
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ  ಯಾವುದೇ ರಾಜಕೀಯ ಪಕ್ಷದ ಮುಖಂಡರು ಉಪ ರಾಷ್ಟ್ರಪತಿ ಅವರನ್ನು ಭೇಟಿ ಮಾಡುವಂತಿಲ್ಲ. 
 
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಏಪ್ರಿಲ್ 29 ರಂದು ದೆಹಲಿ ಯಿಂದ ಮಂಗಳೂರು ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾಸರಗೋಡ್ ನಲ್ಲಿ ಕೇರಳ ವಿಶ್ವ ವಿದ್ಯಾನಿಲಯದ  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 
 
ಬಳಿಕ ಕಾರ್ಯಕ್ರಮ ಮುಗಿಸಿ ಒಂದು ಗಂಟೆಗೆ ಮಂಗಳೂರು ಗೆ ಆಗಮಿಸಿ ನಗರದ ಖಾಸಗಿ ಹೋಟೆಲನಲ್ಲಿ  ವಾಸ್ತವ್ಯ  ಮಾಡಲಿದ್ದಾರೆ. ಏಪ್ರಿಲ್ 30 ರಂದು ಬೆಳಿಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೊಚ್ಚಿನ್ ಗೆ ತೆರಳಲಿದ್ದಾರೆ. 
 
ಅಧಿಕೃತ ಕಾರ್ಯಕ್ರಮ ಕೇರಳದಲ್ಲಿ  ಇದ್ದರೂ ಕೂಡ ಉಪರಾಷ್ಟ್ರಪತಿ  ಮಂಗಳೂರುನಲ್ಲಿ ಯಾಕೆ ವಾಸ್ತವ್ಯ ಮಾಡುತ್ತಿದ್ದಾರೆ ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು  ನಡೆಯುತ್ತಿವೆ. ವೆಂಕಯ್ಯ ನಾಯ್ಡು ಅವರು ಈ ಹಿಂದೆ ಕರ್ನಾಟಕ ದಿಂದ ರಾಜ್ಯ ಸಭೆಯನ್ನು ಪ್ರತಿನಿಧಿಸಿದ್ದರು, ಸಚಿವರಾಗಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ