ಪ್ರಯಾಣಿಕರ ಸೋಗಿನಲ್ಲಿ ದೋಚುತ್ತಿದ್ದ ವ್ಯಕ್ತಿ ಅಂದರ್
22 ವರ್ಷದ ಮೊಹಮ್ಮದ್ ಮುಬಾರಕ್ ಬಂಧಿತ. ಈತ ಇದೇ ದಂದೆಯಿಂದ ಸುಮಾರು 6 ಲಕ್ಷ ರೂ., 160 ಗ್ರಾಂ. ಚಿನ್ನಾಭರಣಗಳನ್ನು ದೋಚಿದ್ದ. ಈತನೀಗ ಕಲಾಸಿಪಾಳ್ಯದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ವಿಕ್ರೋರಿಯಾ ಆಸ್ಪತ್ರೆ ಬಳಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಸರ ಕಳುವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.