ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ವ್ಯಕ್ತಿ ಆತ್ಮಹತ್ಯೆ: ವೈಟ್ ಫೀಲ್ಡ್‌, ಚಲ್ಲಘಟ್ಟಕ್ಕೆ ಸಂಚಾರ ಸ್ಥಗಿತ

Sampriya

ಗುರುವಾರ, 21 ಮಾರ್ಚ್ 2024 (15:15 IST)
ಬೆಂಗಳೂರು: ಮೆಟ್ರೋ ಬರುತ್ತಿದ್ದ ವೇಳೆ  ಟ್ರ್ಯಾಕ್ ಮೇಲೆ ಜಿಗಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಮೆಟ್ರೋ ಬರುತ್ತಿದ್ದ ವೇಳೆ ಟ್ರ್ಯಾಕ್‌ಗೆ ಜಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಚಂದ್ರಲೇಜೌಟ್ ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಇದೀಗ ತನಿಖೆ ಹಿನ್ನೆಲೆ ವೈಟ್ ಫೀಲ್ಡ್‌ನಿಂದ ಚಲ್ಲಘಟಕ್ಕೆ ಮೈಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮೆಟ್ರೋ ಸ್ಥಗಿತ ಹಿನ್ನೆಲೆ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಅದಲ್ಲದೆ ಅತ್ತಿಗುಪ್ಪೆ ಪೊಲೀಸ್‌ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ