ಬಿಯರ್ ಗಾಗಿ ಹರಿದ ನೆತ್ತರು! ಸ್ನೇಹಿತನ ಕತೆ ಫಿನಿಶ್
ಸಂತ್ರಸ್ತ ರಾತ್ರಿ ಮೂರು ಬಾಟಲಿ ಬಿಯರ್ ಖರೀದಿ ಮಾಡಿ ತಂದು ಆರೋಪಿ ಸ್ನೇಹಿತನ ಜೊತೆ ಪಾರ್ಟಿ ಮಾಡಿದ್ದ. ಬೆಳಗಿನ ಜಾವ ಆರೋಪಿ ಇನ್ನೊಂದು ಬಾಟಲಿ ಬಿಯರ್ ತಂದುಕೊಡುವಂತೆ ಸ್ನೇಹಿತನಿಗೆ ಹೇಳಿದ್ದ.
ಆದರೆ ಸ್ನೇಹಿತ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಇಬ್ಬರ ನಡುವೆ ವಾಗ್ವಾದವಾಗಿತ್ತು. ಇದೇ ಸಿಟ್ಟಿನಲ್ಲಿ ಆರೋಪಿ ಚಾಕುವಿನಿಂದ ಸ್ನೇಹತಿನಿಗೆ ಇರಿದಿದ್ದಾನೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.