ಈ ಪವಾಡಸದೃಶ ಘಟನೆಗೆ ಸಾಕ್ಷಿಯಾದ ವ್ಯಕ್ತಿಯ ಹೆಸರು ನಿಂಗಪ್ಪ( 54) .
ಕಳೆದ ಫೆಬ್ರವರಿ 16 ರಂದು ನಿಂಗಪ್ಪನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದ ವೈದ್ಯರು ಎರಡು ದಿನ ತೀವ್ರ ನಿಗಾ ಘಟಕದಲ್ಲಿಟ್ಟಿದ್ದರು. ಆದರೆ ಆಗ ಕೋಮಾ ಸ್ಥಿತಿಗೆ ತಲುಪಿದ್ದ ನಿಂಗಪ್ಪ ಸುಧಾರಿಸಿಕೊಳ್ಳುವ ಲಕ್ಷಣವನ್ನು ತೋರಲಿಲ್ಲ. ಹೀಗಾಗಿ ವೈದ್ಯರು ಒಂದು ಗಂಟೆ ಬದುಕುವುದು ಜಾಸ್ತಿ. ಮನೆಗೊಯ್ಯಿರಿ ಎಂದಿದ್ದಾರೆ. ಅಂಬುಲೆನ್ಸ್‌ನಲ್ಲಿ ಅವರನ್ನು ಮನೆಗೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅವರ ಉಸಿರಾಟ ನಿಂತಿದ್ದು, ಅಂಬುಲೆನ್ಸ್ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.