ಮಂಡ್ಯದಲ್ಲಿ ಅಂಗಡಿ, ಮುಂಗಟ್ಟು ಮುಚ್ಚಿಸಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು

ಬುಧವಾರ, 7 ಸೆಪ್ಟಂಬರ್ 2016 (11:20 IST)
ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ್ದಕ್ಕೆ ರೈತರ ಆಕ್ರೋಶ ವ್ಯಕ್ತವಾದ ಹಿನ್ನಲೆಯೆಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಂಜೆ ನಾಲ್ಕು ಗಂಟೆಗೆ ಕೆಆರ್‌ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ.ಈಗಾಗಲೇ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿಯಿಂದ ನೀರು ಬಿಡುಗಡೆ ಮಾಡಲಾಗಿದೆ.

ಕೆಆರ್‌ಎಸ್‌ನಿಂದ 12,900 ಕ್ಯೂಸೆಕ್ ನೀರು  ಕಬಿನಿಯಿಂದ 4 ಸಾವಿರ, ಹೇಮಾವತಿಯಿಂದ 4999, ಹಾರಂಗಿಯಿಂದ 2000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಲ್ಕೂ ಕಡೆಗಳಿಂದ 20,000 ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದುಹೋಗಿದೆ. ತಮಿಳುನಾಡು ತಲುಪುವಷ್ಟರಲ್ಲಿ 5000 ಕ್ಯೂಸೆಕ್ ನೀರು ಪೋಲಾಗುವುದರಿಂದ ಹೆಚ್ಚಿನ ನೀರನ್ನು ಹರಿಸಲಾಗಿದ್ದು, ಇದು ಬಿಳಿಗುಂಡ್ಲು ಮಾಪನ ಕೇಂದ್ರವನ್ನು ತಲುಪುತ್ತದೆ.
 
ಈ ನಡುವೆ ಮಂಡ್ಯದ ಪೇಟೆ ಬೀದಿಯಲ್ಲಿ ಅಂಗಡಿಗಳಿಗೆ ಕಲ್ಲು ತೂರಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿ, ಮುಗ್ಗಂಟು ಮುಚ್ಚಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ