ಮಂಡ್ಯ ನಗರಸಭೆ ಅಧ್ಯಕ್ಷಸ್ಥಾನ: ಕಾಂಗ್ರೆಸ್ ತೆಕ್ಕೆಗೆ

ಸೋಮವಾರ, 9 ಜುಲೈ 2018 (17:54 IST)
ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅವ್ರ ಅಕಾಲಿಕ ನಿಧನದಿಂದ ತೆರವಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ್ರೆ, ತನ್ನ ಭದ್ರಕೋಟೆಯಲ್ಲೇ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲನ್ನಪ್ಪಿದೆ. 

ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅವ್ರ ಅಕಾಲಿಕ ನಿಧನದಿಂದ ತೆರವಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ್ರೆ, ತನ್ನ ಭದ್ರಕೋಟೆಯಲ್ಲೇ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲನ್ನಪ್ಪಿದೆ. 

ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಗಾದಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಪಾಲಾಗಿದೆ. 35 ಸದಸ್ಯರ ಬಲವುಳ್ಳ ಮಂಡ್ಯ ನಗರಸಭೆಯಲ್ಲಿ ಹಾಲಿ ಅಧ್ಯಕ್ಷ ಬೋರೇಗೌಡ ಸಾವನ್ನಪ್ಪಿದ್ದರಿಂದ ಕಾಂಗ್ರೆಸ್ ಸದಸ್ಯರ ಸಂಖ್ಯೆ 14 ಇದ್ದರೆ, ಜೆಡಿಎಸ್ 10, ಬಿಜೆಪಿ 1, ಪಕ್ಷೇತರರು 9 ಮಂದಿ ಇದ್ದರು. ಈ ಪೈಕಿ 33 ಮಂದಿ ಇಂದು ಅಧ್ಯಕ್ಷರ ಚುನಾವಣೆಯಲ್ಲಿ ಭಾಗಿಯಾಗಿದ್ರು. ಮಂಡ್ಯ ನಗರಸಭೆಯ ನೂತನ ಅಧ್ಯಕ್ಷರಾಗಿ ನಗರದ 26ನೇ ವಾರ್ಡ್​ನ ಶಹಜಾನ್ ಆಯ್ಕೆಯಾದ್ರೆ, ಜೆಡಿಎಸ್ ಅಭ್ಯರ್ಥಿ ಸುನೀತಾ ರವೀಂದ್ರ ಹೀನಾಯ ಸೋಲುಂಡ್ರು. ಶಹಜಾನ್ ಪರ 30 ಮಂದಿ ಸದಸ್ಯರು ಮತ ಹಾಕಿದ್ರೆ, ಜೆಡಿಎಸ್ ಪರ ಕೇವಲ 3 ಮಂದಿ ಸದಸ್ಯರು ಮಾತ್ರ ಮತ ಹಾಕಿದ್ರು. ವಿಪ್ ಜಾರಿ ಮಾಡಿಲ್ಲದ ಕಾರಣ 10 ಮಂದಿ ಜೆಡಿಎಸ್ ಸದಸ್ಯರಿದ್ದರೂ ಆ ಪೈಕಿ ಜೆಡಿಎಸ್ ನ ಸುನೀತಾಗೆ ಬಿದ್ದಿದ್ದು ಕೇವಲ 3 ಮತಗಳು.

ಮಂಡ್ಯ ಜಿಲ್ಲೆಯು ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಮಂಡ್ಯ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ ನವ್ರೇ ಇದ್ದರು. ಜೆಡಿಎಸ್ ಮನಸ್ಸು ಮಾಡಿದ್ರೆ ಅಧಿಕಾರವನ್ನು ಸುಲಭವಾಗಿ ಹಿಡಿಯಬಹುದಿತ್ತು. ಆದರೆ ಜೆಡಿಎಸ್ ಇನ್ನು ನಗರಸಭೆ ಅಧಿಕಾರಾವಧಿ ಕೇವಲ 63 ದಿನ ಮಾತ್ರ ಇರೋದ್ರಿಂದ ತಲೆ ಕೆಡಿಸಿಕೊಳ್ಳಲಿಲ್ಲ. ಜೊತೆಗೆ ಸದಸ್ಯರಿಗೆ ವಿಪ್ ಕೂಡ ಜಾರಿ ಮಾಡಿರಲಿಲ್ಲ. ಈ ನಿಟ್ಟಿನಲ್ಲಿ ಕೆಲ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ಕೊಟ್ರು. ಹಾಗಾಗಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿದ್ರೆ, ಜೆಡಿಎಸ್ ಹೀನಾಯವಾಗಿ ಸೋಲನ್ನಪ್ಪಿತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ