ಮಂಗಳೂರು, ಬೆಂಗಳೂರು ನಡುವೆ ಮತ್ತೆ ರೈಲು ಸಂಚಾರ ಸ್ಥಗಿತ

Krishnaveni K

ಶನಿವಾರ, 10 ಆಗಸ್ಟ್ 2024 (11:47 IST)
ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿ ಮೇಲೆ ಗುಡ್ಡ ಕುಸಿತವಾಗಿರುವುದರಿಂದ ಬೆಂಗಳೂರು ಮಂಗಳೂರು ನಡುವೆ ಮತ್ತೆ ಸ್ಥಗಿತವಾಗಿದೆ. ಮಣ್ಣು ತೆರವು ಕಾರ್ಯ ತರಾತುರಿಯಲ್ಲಿ ನಡೆಯುತ್ತಿದೆ.

ಭೂ ಕುಸಿತದಿಂದಾಗಿ ಮಧ್ಯರಾತ್ರಿಯಿಂದ ರೈಲುಗಳು ನಿಂತಲ್ಲೇ ನಿಂತಿವೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಹಳಿ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಹಳಿಗಳಿಂದ ಮಣ್ಣು ತೆರವು ಮಾಡಲು ಜೆಸಿಬಿ ನೆರವು ಪಡೆಯಲಾಗಿದೆ. ಇತ್ತೀಚೆಗಷ್ಟೇ ರೈಲು ಪುನರಾರಂಭಗೊಂಡಿತ್ತು.

ಎಡಕುಮೇರಿಯಲ್ಲಿ ಗುಡ್ಡ ಕುಸಿದಿದ್ದರಿಂದ ಕೆಲವು ದಿನಗಳಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು. ಮೊನ್ನೆಯಷ್ಟೇ ರೈಲು ಸಂಚಾರ ಪುನರಾರಂಭಗೊಂಡಿತ್ತು. ಎರಡೇ ದಿನಕ್ಕೆ ಗುಡ್ಡ ಕುಸಿತವಾಗಿ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಕಣ್ಣೂರು ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ ಆಲೂರು ಸ್ಟೇಷನ್ ನಲ್ಲಿ ಊಟ-ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಕಾರವಾರ-ಕೆಎಸ್ ಆರ್  ಬೆಂಗಳೂರು ಪಂಚಗಂಗ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ ದೋಣಿಗಲ್ ನಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಬಳಿಕ ಪ್ರಯಾಣಿಕರಿಗೆ ಬೇರೆ ವಾಹನದ ವ್ಯವಸ್ಥೆ ಮಾಡಿ ಗಮ್ಯ ಸ್ಥಳ ತಲುಪಿಸಲು ಸಹಾಯ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ