ಸಕಲೇಶಪುರದಲ್ಲಿ ನೋಡ ನೋಡುತ್ತಿದ್ದಂತೇ ಪಲ್ಟಿ ಹೊಡೆದ ಬೃಹತ್ ಟ್ರಕ್: ವಿಡಿಯೋ ವೈರಲ್
ಇದೀಗ ಬೃಹತ್ ಗಾತ್ರದ ಟ್ರಕ್ ಒಂದು ನೋಡ ನೋಡುತ್ತಿದ್ದಂತೇ ಪಲ್ಟಿ ಹೊಡೆಯುತ್ತಿರುವ ದೃಶ್ಯವೊಂದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಭಾರೀ ಗಾತ್ರದ ಟ್ರಕ್ ಮಾರ್ನಳ್ಳಿ ಬಳಿ ಪಲ್ಟಿ ಹೊಡೆದಿದೆ. ಮಳೆಯಿಂದಾಗಿ ಡ್ರೈವರ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿಯಾಗಿದೆ.
ತಡರಾತ್ರಿವರೆಗೂ ಸಕಲೇಶಪುರದಲ್ಲಿ ರಸ್ತೆ ಕ್ಲಿಯರ್ ಆಗಲು ಕಾದು ನಿಂತಿದ್ದ ಲಾರಿ ದಾರಿ ಕ್ಲಿಯರ್ ಆದ ಸೂಚನೆ ದೊರೆತ ಬಳಿಕ ಇನ್ನೇನು ಹೊರಡಲು ಸಿದ್ಧವಾಯಿತು. ಕೆಲವೇ ಹೆಜ್ಜೆ ಮುಂದೆ ಸಾಗಿದ ಬಳಿಕ ಜಾರುವ ರಸ್ತೆಯಲ್ಲಿ ನಿಯಂತ್ರಣ ಸಾಧಿಸಲಾಗದೇ ಲಾರಿ ಪಲ್ಟಿಯಾಗಿದೆ.
ತರಕಾರಿ ತುಂಬಿಕೊಂಡಿದ್ದ ಲಾರಿ ಹಾಸನದಿಂದ ಮಂಗಳೂರು ಕಡೆಗೆ ಸಂಚರಿಸುತ್ತಿತ್ತು ಎನ್ನಲಾಗಿದೆ. ತಡರಾತ್ರಿ ಘಟನೆ ನಡೆದಿದ್ದು, ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.