Mangaluru Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಹಂತಕರು ಭಯಾನಕ ಪ್ಲ್ಯಾನ್ ಮಾಡಿದ್ದ ಹಂತಕರು: ಮೀನಿನ ಟೆಂಪೊ ಮಧ್ಯೆ ಬಂದಿದ್ದೇಕೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರ ತೀರಿಸಲು ಫಾಜಿಲ್ ಎಂಬಾತನ ಕೊಲೆ ಮಾಡಲಾಗಿತ್ತು. ಈತನ ಕೊಲೆ ಆರೋಪಿಗಳಲ್ಲಿ ಪ್ರಮುಖ ಸುಹಾಸ್ ಶೆಟ್ಟಿ.
ಆತನನ್ನು ನಿನ್ನೆ ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದಕ್ಕೆ ಹಂತಕರು ಒಂದು ಸ್ವಿಫ್ಟ್ ಮತ್ತು ಮೀನಿನ ಟೆಂಪೊ ಬಳಸಿದ್ದಾರೆ. ಸುಹಾಸ್ ಶೆಟ್ಟಿ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಂತಕರು ಮೀನಿನ ಟೆಂಪೊ ಮತ್ತು ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿದ್ದಾರೆ.
ಮೊದಲು ಸುಹಾಸ್ ಕಾರಿಗೆ ಮೀನಿನ ಟೆಂಪೊದಿಂದ ಢಿಕ್ಕಿ ಹೊಡೆದಿದ್ದಾರೆ. ಬಳಿಕ ಸುಹಾಸ್ ಕೆಳಗಿಳಿಯುತ್ತಿದ್ದಂತೇ ಸ್ವಿಫ್ಟ್ ಕಾರಿನಲ್ಲಿ ಬಂದವರು ಸೇರಿಕೊಂಡು ಮಚ್ಚಿನಿಂದ ಕಡಿದು ಕೊಂದಿದ್ದಾರೆ. ಬಳಿಕ ಸ್ವಿಫ್ಟ್ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.