ಮಾವು ಪ್ರದರ್ಶನ; ರುಚಿಕರ ಹಣ್ಣು ಸವಿದು ಫುಲ್ ಖುಷ್

ಶನಿವಾರ, 25 ಮೇ 2019 (17:17 IST)
ಇಂದಿನಿಂದ ಆರಂಭವಾದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರುಚಿಕರ ಹಾಗೂ ತರಹೇವಾರಿ ಮಾವುಗಳನ್ನು ಸವಿಯುತ್ತಿರುವ ಜನರು ಫುಲ್ ಖುಷ್ ಆಗಿದ್ದರೆ.

ಕರ್ನಾಟಕ‌ ರಾಜ್ಯ ಮಾವು ಅಭಿವೃದ್ಧಿ ಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಂದಿಬೆಟ್ಟದಲ್ಲಿ ಇಂದಿನಿಂದ ಆರಂಭವಾದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಪಿ.ಅನಿರುದ್ದ್ ಶ್ರವಣ್ ಚಾಲನೆ ನೀಡಿದರು. 

ಚಿಕ್ಕಬಳ್ಳಾಪುರ ಜಿಲ್ಲೆ ವಿವಿಧ ತಳಿಗಳ ಉತ್ಕೃಷ್ಟ ಗುಣಮಟ್ಟದ ಹಾಗೂ ನೈಸರ್ಗಿಕವಾಗಿ‌ ಹಣ್ಣಾಗಿಸಿದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪುವಂತೆ ಮಾಡುವುದು ಈ ಮಾವು ಮೇಳದ ಪ್ರಮುಖ ಉದ್ದೇಶ. ಇದರಿಂದ ರೈತರಿಗೆ ಮಾರುಕಟ್ಟೆ ಪ್ರೋತ್ಸಾಹವೂ ದೊರೆತಂತಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು.

ಮೇಳದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ವಿವಿಧ ತಳಿಗಳ ಮಾವಿನ ಹಣ್ಣುಗಳು ಪ್ರದರ್ಶನಗೊಳ್ಳುತ್ತಿವೆ. ಪ್ರವಾಸಿಗರಿಂದ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ