ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾವಿನ ಹಣ್ಣು

ಬುಧವಾರ, 29 ಮಾರ್ಚ್ 2023 (14:20 IST)
ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ ವಾಗ್ತಿದಂತೆ  ರೈತರು ಬೆಳೆದ ಬೆಳೆ  ಬಿಸಿಲಿಗೆ ಹೊಲ, ಗದ್ದೆಗಳಲ್ಲಿ ನಾಶವಾಗ್ತಿವೆ. ಹೊರರಾಜ್ಯಗಳಿಂದ ಸರಕುಗಳು  ರಾಜಧಾನಿಗೆ  ಬರುವುದು ಕಡಿಮೆ ಆಗಿದೆ, ಒಂದೆಡೆ  ಹಣ್ಣು, ತರಕಾರಿ ಸೊಪ್ಪುಗಳ ಬೆಲೆಯಲ್ಲಿ  ಏರ ಇಳಿತ ಕಂಡುಬರುತ್ತಾ ಇದ್ರೆ ಮತ್ತೋದೆಡೆ ಮಾರುಕಟ್ಟೆಗೆ ತರ ತರ ಮಾವಿನ ಹಣ್ಣು ಲಗ್ಗೆ ಇಡ್ತಿವೆ . ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣು ಪ್ರೀಯರಿಗೆ ಸಿಹಿ ಅನುಭವವನ್ನುಂಟು ಮಾಡಿದ್ದು, ಏಪ್ರಿಲ್ ಕೊನೆಯ ಹಾಗೂ ಮೇ ಮೊದಲ ವಾರದಲ್ಲಿಆಫೂಸ್, ಕಲ್ಮಿ, ತೋತಾಪುರಿ, ಬಾದಾಮಿ, ಸವಾರಿ, ಬೇನಿಶಾ, ಸಿಂಡುಲಾ, ರಸಿಪುರಿ ಸೇರಿ ವಿವಿಧ ತಳಿಯ ಮಾವಿನ ಹಣ್ಣುಗಳು ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು , ಮಾವಿನ ಹಣ್ಣಿನ ಖರೀದಿಯಲ್ಲಿ ಜನ ಬ್ಯುಸಿ ಆಗಿದ್ದಾರೆ.

ಇನ್ನೂ  ಕಳೆದೆರಡು ವರ್ಷಗಳಿಂದ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಮಾವು ವ್ಯಾಪಾರ ವಹಿವಾಟು ಚೆನ್ನಾಗಿಯೇ ಇತ್ತು. ಲಾಕ್ ಡೌನ್ ಸಂದರ್ಭದಲ್ಲಿ ಜನ ಸಾಮಾನ್ಯರು ಹೆಚ್ಚಾಗಿ ಓಡಾಡದೇ ಇದ್ದರೂ ಹಣ್ಣುಗಳು ಖರೀದಿಸಿ ಮನೆಯಲ್ಲಿ ಸೇವನೆ ಮಾಡುತ್ತಿದ್ದರು. ಆದರೆ ಕೋವಿಡ್ ನಂತರದ ದಿನಗಳಲ್ಲಿ ಇತ್ತೀಚೆಗೆ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದು, ಮಾರುಕಟ್ಟೆಗಳಲ್ಲಿ ಬಗೆಬಗೆಯ ಮಾವಿನ ಹಣ್ಣುಗಳು ಲಭ್ಯವಿದ್ದರೂ ಗ್ರಾಹಕರು ಹಿಂದಿನ ವರ್ಷಕ್ಕಿಂತ ಈ ವರ್ಷ ಮಾವಿನ ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಮೇ ಮೊದಲ ವಾರದಲ್ಲೇ ಪಟ್ಟಣದ ಮಾರುಕಟ್ಟೆ ಪ್ರವೇಶಿಸಿದೆ ಮಾವಿನ ಹಣ್ಣು , ಈ ತಳಿಗಳ ಪೈಕಿ ಅಫೂಸ್ ಮತ್ತು ತೋತಾಪುರಿ ಇಂತಹ ಜವಾರಿ ಹಣ್ಣುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಮಾವು ಇಳುವರಿಯು ಮಾರುಕಟ್ಟೆಯಲ್ಲಿ ಕೊಂಚ ಉತ್ತಮವಾಗಿದ್ದರೂ ವ್ಯಾಪಾರಸ್ಥರು ನಿರೀಕ್ಷಿಸಿದ ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿಲ್ಲ.ಇದರ ಜೊತೆಗೆ ಇನ್ನಿತರ ತರಕಾರಿ ಹಾಗೂ ಹಣ್ಣುಗಳ ಬೆಲೆ ಸಹ ಏರಿಕೆಯಾಗ್ತಾಯಿದ್ದು  ಮುಂದಿನದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಬಹುದು ಎನ್ನುತಿದ್ದಾರೆ ತರಕಾರಿ ವ್ಯಾಪಾರಸ್ಥರು 

ಒಟ್ಟಾರೆಯಾಗಿ ಮಾರುಕಟ್ಟೆಗೆ ಇನ್ನಷ್ಟು ಮಾವಿನ ಹಣ್ಣು ಬಂದಿಳಿಯಲು ಅರ್ಧ ಸೀಜನ್ ಬಾಕಿದ್ದು, ಯುಗಾದಿ ಬಳಿಕವಷ್ಟೇ ಆರಂಭವಾಗಬೇಕಿದ್ದ ಮಾವಿನ ಹಣ್ಣಿನ ಸೀಜನ್ ಈ ಬಾರಿ ಅಕಾಲಿಕ ಮಳೆಗೆ ತುತ್ತಾಗಿ, ಇಬ್ಬನಿಯಿಂದ ಹೂವು ಮೂಗ್ಗುಗಳಿಗೆ ಹೊಡೆತ ಬಿದ್ದಿದ್ದರಿಂದ ಮಾರುಕಟ್ಟೆಗೆ ತಡವಾಗಿ ಬಂದಿದೆ. ಈಗಾಗಲೇ ಮೇ ಮೂರನೇ ಆರಂಭವಾಗಿದ್ದು, ಅರ್ಧ ಸೀಜನ್ ಮುಗಿದು ಬಿಟ್ಟಿದೆ. ಮುಂಗಾರು ಮಳೆ ಪ್ರಾರಂಭಗೊಂಡರೆ ಮಾವಿನ ಹಣ್ಣುಗಳು ಬೇಡಿಕೆ ಇಲ್ಲದಂತಾಗಿ ಸೀಜನ್ ಮುಗಿಯುವ ಆತಂಕ ವ್ಯಾಪಾರಿಗಳಿಗೆ ಕಾಡಲಾರಂಭಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ