ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾವಿನ ಹಣ್ಣು

ಭಾನುವಾರ, 26 ಮಾರ್ಚ್ 2023 (20:20 IST)
ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ ವಾಗ್ತಿದಂತೆ  ರೈತರು ಬೆಳೆದ ಬೆಳೆ  ಬಿಸಿಲಿಗೆ ಹೊಲ, ಗದ್ದೆಗಳಲ್ಲಿ ನಾಶವಾಗ್ತಿವೆ. ಹೊರರಾಜ್ಯಗಳಿಂದ ಸರಕುಗಳು  ರಾಜಧಾನಿಗೆ  ಬರುವುದು ಕಡಿಮೆ ಆಗಿದೆ, ಒಂದೆಡೆ  ಹಣ್ಣು, ತರಕಾರಿ ಸೊಪ್ಪುಗಳ ಬೆಲೆಯಲ್ಲಿ  ಏರ ಇಳಿತ ಕಂಡುಬರುತ್ತಾ ಇದ್ರೆ ಮತ್ತೋದೆಡೆ ಮಾರುಕಟ್ಟೆಗೆ ತರ ತರ ಮಾವಿನ ಹಣ್ಣು ಲಗ್ಗೆ ಇಡ್ತಿವೆ .
 
ಬಿಸಿಲಿನ  ಝಳ ಏರುತ್ತಿದ್ದಂತೆಯೇ ಹುರುಳಿಕಾಯಿ ಸೇರಿದಂತೆ ಕೆಲ ಹಣ್ಣುಗಳು  ಬೆಲೆ ಏರುಮುಖವಾಗಿ ಸಾಗುತ್ತಿದೆ. ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು ಕ್ಯಾರೆಟ್, ಬದನೆಕಾಯಿಗಳ ದರದಲ್ಲಿ ಕೊಂಚ ಇಳಿಕೆಯಾಗಿದೆ, ಹುರುಳಿ ಕಾಯಿ ಕಳೆದ ವಾರ ಕೆ.ಜಿ.ಗೆ ಕೇವಲ 60 ರೂ. ಇದ್ದುದು ಈಗ 80 ರೂ. ತಲುಪಿದೆ. ಬಿಸಿಲಿನಿಂದಾಗಿ ಬೆಳೆಗಳಿಗೆ ನೀರು ಕಡಿಮೆಯಾಗಿ, ಉತ್ಪಾದನೆ ಕುಂಠಿತ ಗೊಂಡಿದೆ. ಇದೇ ವೇಳೆ ಎಲ್ಲೆಡೆ ಮದುವೆ, ಗೃಹಪ್ರವೇಶದಂತಹ ಶುಭ  ಕಾರ್ಯಗಳು ಹೆಚ್ಚಾಗಿ ನಡೆಯುತ್ತಿರು ವುದರಿಂದ  ಹಣ್ಣು  ಮತ್ತು ತರಕಾರಿಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ