ಹಾನಗಲ್ ‘ಕೈ’ ಟಿಕೆಟ್ಗೆ ಮನೋಹರ್ ಲಾಭಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಲಾಭಿ ಜೋರಾಗೇ ನಡೀತಿದೆ. ಮಾಜಿ ಸಚಿವ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನೋಹರ್ ತಹಶೀಲ್ದಾರ್ ದೆಹಲಿ ನಾಯಕರನ್ನು ಭೇಟಿಯಾಗಿ ಟಿಕೆಟ್ಗಾಗಿ ಲಾಭಿ ನಡೆಸಿದ್ದಾರೆ.. ಹಾನಗಲ್ ಕ್ಷೇತ್ರದ ಕೈ ಟಿಕೆಟ್ಗಾಗಿ ಮನೋಹರ್ ತಹಶೀಲ್ದಾರ್ ಕಸರತ್ತು ನಡೆಸಿದ್ದಾರೆ.. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿರುವ ಅವರು, ನನ್ನದು ಕೊನೆಯ ಚುನಾವಣೆ, ಈ ಬಾರಿ ನನಗೆ ಟಿಕೆಟ್ ಕೊಡಿ. ನನಗೆ ಕೊಡದಿದ್ದರು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಅವರು ಒತ್ತಾಯಿಸಿದ್ದಾರೆ. AICC ಪಟ್ಟಿಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಹೆಸರು ಔಟ್ ಆಗುತ್ತಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.