ಉರಿಗೌಡ-ನಂಜೆಗೌಡ ಚಿತ್ರ ಮಾಡಲು ಸಚಿವ ಮುನಿರತ್ನ ಮುಂದಾಗಿದ್ರು ಅದಕ್ಕೆ ಮೇ 18 ರಂದು ಚಿತ್ರವನ್ನು ಆರಂಭಿಸುವುದಕ್ಕೆ ದಿನಾಂಕವನ್ನು ನಿಗದಿಪಡಿದಿದ್ರು. ಈ ಬಗ್ಗೆ ನಿರ್ಮಲಾನಂದ ಶ್ರೀ ಗಳನ್ನು ಸಚಿವ ಮುನಿರತ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ಈ ವೇಳೆ ನಿರ್ಮಾಲಾನಂದ ಸ್ವಾಮೀಜಿಗಳು ಉರಿಗೌಡ-ನಂಜೆಗೌಡ ಕುರಿತು ಸಿನಿಮಾ ಮಾಡುವುದು ಬೇಡ ಎಂದು ಹೇಳಿದ್ದಾರೆ.ಈ ಹಿನ್ನೆಲೆ ಚಿತ್ರ ಮಾಡುವ ಸಾಹಸಕ್ಕೆ ತೆರೆ ಎಳೆದಿದ್ದಾರೆ.ಈ ಬಗ್ಗೆ ಡಿಕೆ ಸುರೇಶ್ ಮಾತನಾಡಿ ಸ್ವಾಮೀಜಿ ಹೇಳಿದ್ರ ಅಂತ ಪ್ರಚಾರ ಪಡೆಯೋದು.ಇದಕ್ಕೆ ಪಾಠವನ್ನು ಒಕ್ಕಲಿಗರು ತಕ್ಕ ಪಾಠ ಕಲಿಸುತ್ತಾರೆ.ಅವರೇ ಘೋಷಣೆ ಮಾಡಿದ್ದಾರೆ.ನಾನು ಅವರ ಫೇಸ್ ಬುಕ್ ನಲ್ಲಿ ನೋಡಿದ್ದೇನೆ.ಅಶ್ವತ್ಥ ನಾರಾಯಣ ಚಿತ್ರಕಥೆ ಅಂತ ಹಾಕಿದ್ದಾರೆ.ಅಶ್ವತ್ಥ ನಾರಾಯಣ ಅವರು ಅಸ್ವಸ್ಥರಾಗಿದ್ದಾಗ ಭೇಟಿ ಮಾಡಿರಬಹುದು. ಉರಿಗೌಡ,ನಂಜೇಗೌಡ ಅವರನ್ನ,ಅದಕ್ಕೆ ಕಥೆ ಚಿತ್ರಕಥೆ ಬರೆದಿರಬಹುದು.ಆದ್ರೆ ಒಕ್ಕಲಿಗರನ್ನ ಒಂದು ಸಮಾಜದಲ್ಲಿ ಎಲ್ಲ ಜಾತಿ ಧರ್ಮಗಳ ಜೊತೆ ಗೌರವಯುತ ಬದುಕುವ ಸಮಾಜ, ಆ ವ್ಯಾಪರಕ್ಕೆ ನಿಂತವರಲ್ಲ.ಯಾರನ್ನ ಬೇಕಾದರು ವ್ಯಾಪಾರ ಮಾಡುವುದು ಒಕ್ಕಲಿಗರ ಜಾಯಮಾನವಲ್ಲ.