ಜನರ ಸಮಸ್ಯೆಗಳಿಗೆ ಚರ್ಚೆಯಾಗುವ ವೇದಿಕೆಯಾಗುವ ಮುಂಗಾರು ಅಧಿವೇಶನದ ಕಲಾಪಕ್ಕೆ ಬಹುತೇಕ ಶಾಸಕರು ಗೈರುಹಾಜರಾಗಿ ಬೇಜವಾಬ್ದಾರಿ ಮೆರೆದಿದ್ದಾರೆ.
ರಾಜ್ಯದ 224 ಶಾಸಕರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೂವರು ಸಚಿವರು ಸೇರಿದಂತೆ 13 ಶಾಸಕರು ಹಾಜರಾಗಿದ್ದಾರೆ, ಬಿಜೆಪಿಯಿಂದ 10 ಶಾಸಕರು ಮತ್ತು ಜೆಡಿಎಸ್ ಪಕ್ಷದಿಂದ 3 ಶಾಸಕರು ಹಾಜರಾಗಿದ್ದಾರೆ.
ಸದನದಲ್ಲಿ ಕೇವಲ 26 ಶಾಸಕರು ಉಪಸ್ಥಿತರಿದ್ದು, 198 ಶಾಸಕರು ಮುಂಗಾರು ಅಧಿವೇಶನಕ್ಕೆ ಗೈರುಹಾಜರಾಗಿದ್ದಾರೆ.
ರಾಜ್ಯದಾದ್ಯಂತ ಭೀಕರ ಬರಗಾಲ ಎದುರಾಗಿ ಜನತೆ ಸಂಕಷ್ಟದಲ್ಲಿದ್ದರೂ ಜನತೆಯ ಸಂಕಷ್ಟಗಳಿಗೆ ಸದನದಲ್ಲಿ ಸರಕಾರದೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿಕೊಡುವ ಬದಲಿಗೆ ವಿಪಕ್ಷಗಳ ಶಾಸಕರೇ ಗೈರುಹಾಜರಾಗಿರುವುದು ಜನಪ್ರತಿನಿಧಿಗಳ ಬೇಜವಾಬ್ದಾರಿ ಬಹಿರಂಗವಾಗಿದೆ.
ಮುಂಗಾರು ಅಧಿವೇಶನಕ್ಕೆ ಗೈರುಹಾಜರಾಗುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.