ಹೊರನಾಡು ಬಳಿಕ ಮಂತ್ರಾಲಯದಿಂದ ದೇಶ ರಕ್ಷಣೆಗೆ ಲಕ್ಷ ಲಕ್ಷ ದೇಣಿಗೆ

Krishnaveni K

ಮಂಗಳವಾರ, 13 ಮೇ 2025 (11:28 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಕದನದ ನಡುವೆ ಭಾರತೀಯ ಸೇನೆಗೆ ನೆರವಾಗುವ ದೃಷ್ಟಿಯಿಂದ ಹೊರನಾಡು ಅನ್ನಪೂರ್ಣ ದೇವಾಲಯ ಆಡಳಿತ ಮಂಡಳಿ 10 ಲಕ್ಷ ರೂ.ಗಳ ದೇಣಿಗೆ ನೀಡಿತ್ತು. ಇದೀಗ ಮಂತ್ರಾಲಯದ ಗುರು ರಾಯರ ಸನ್ನಿಧಿ ಸರದಿ.

ದೇಶದ ರಕ್ಷಣಾ ನಿಧಿಗೆ ಮಂತ್ರಾಲಯದಿಂದ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಮಂತ್ರಾಲಯದ ಶ್ರೀ ಸುಬುಧೇಂದ್ರ ಸ್ವಾಮೀಜಿಗಳು  ಘೋಷಣೆ ಮಾಡಿದ್ದಾರೆ. 13 ನೇ ಪಟ್ಟಾಭಿಷೇಕ ಮಹೋತ್ಸವದ ವೇಳೆ ಶ್ರೀಗಳು ಈ ಘೋಷಣೆ ಮಾಡಿದ್ದಾರೆ.

ತುಲಾಭಾರ ಕಾರ್ಯಕ್ರಮದ ವೇಳೆ ಮಾತನಾಡಿದ ಶ್ರೀಗಳು, ದೇಶದಲ್ಲಿ ಯುದ್ಧದ ವಾತಾವರಣವಿದೆ. ಅಶಾಂತಿ ಉಂಟಾಗಿದೆ.  ತಾತ್ಕಾಲಿಕವಾಗಿ ಯುದ್ಧ ವಿರಾಮ ಘೋಷಣೆ ಮಾಡಲಾಗಿದೆ. ನಮ್ಮ ಯೋಧರು ಪ್ರಾಣವನ್ನೂ ಲೆಕ್ಕಿಸದೇ ದೇಶ ರಕ್ಷಣೆ ಮಾಡುತ್ತಿದ್ದಾರೆ.

ಗಡಿಯಲ್ಲಿ ಸೈನಿಕರ ಒಳಿತಿಗಾಗಿ ಮಠದಲ್ಲಿ ಹೋಮ ಪೂಜೆ ನೆರವೇರಿಸಲಾಗಿದೆ. ದೇಶ ರಕ್ಷಣೆಗಾಗಿ ಮಠದ ವತಿಯಿಂದ 25 ಲಕ್ಷ ರೂ. ದೇಣಿಗೆ ನೀಡಲಿರುವುದಾಗಿ ಘೋಷಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ