ಗಂಡು-ಹೆಣ್ಣು ಇಲ್ಲದೇ ನಡೆದು ಹೋಯಿತು ಮದುವೆ?

ಮಂಗಳವಾರ, 25 ಜೂನ್ 2019 (18:44 IST)
ಅಲ್ಲಿರುವ ಇಡೀ ಗ್ರಾಮದಲ್ಲಿ ತಳಿರು ತೋರಣದ ಅಲಂಕಾರ ಮಾಡಲಾಗಿತ್ತು. ಶಾಮಿಯಾನ ಹಾಕಿ ಅಡುಗೆ ಮಾಡಿ ಭರ್ಜರಿ ಮದುವೆ ಮಾಡಲಾಯಿತು.

ಮದು ಮಗ – ಮದುಮಗಳನ್ನು ಅಲಂಕಾರ ಮಾಡಲಾಗಿತ್ತು. ಆದರೆ ಅಲ್ಲಿ ಮದುವೆಯಾದದ್ದು ಮಾತ್ರ ಗಂಡು-ಹೆಣ್ಣು ಅಲ್ಲ. ಆದರೂ ಶಾಸ್ತ್ರ ಸಂಪ್ರದಾಯಕ್ಕೆ ಆ ಮದುವೆಯಲ್ಲೇನೂ ಕೊರತೆ ಇರಲಿಲ್ಲ.

ಕತ್ತೆಗಳ ಶಾಸ್ತ್ರೋಕ್ತ ಮದುವೆಗೆ ಸಾಕ್ಷಿಯಾಗಿದ್ದಾರೆ ಗ್ರಾಮದ ಜನರು. ಮದು ಮಗ-ಮಧುವಣಗಿತ್ತಿಯರಂತೆ ಕತ್ತೆಗಳನ್ನು ಸಿಂಗರಿಸಿ ಮದುವೆ ಮಾಡಲಾಗಿದೆ.

ಮದುವೆಗೆ ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಇತ್ತು. ಶಾಮಿಯಾನ ಹಾಕಿ ಕತ್ತೆಗಳಿಗೆ ಬಾಸಿಂಗ್ ಕಟ್ಟಿ, ಆರತಿ ಬೆಳಗಿ, ಮಂತ್ರಘೋಷಗಳ ಜೊತೆಗೆ ವಾದ್ಯಮೇಳ ತರಿಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು. ಅಂದ್ಹಾಗೆ ಮಳೆಗಾಗಿ ಕತ್ತೆಗಳ ಮದುವೆ ನಡೆದದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ.

ವರುಣನ ಕೃಪೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ ಗ್ರಾಮಸ್ಥರು. ಈ ಹಿಂದೆಯೂ ಕತ್ತೆಗಳ ಮದುವೆ ಮಾಡಿದಾಗ ಮಳೆಯಾದ ಪ್ರತೀತಿ ಇದೆ. ಹಳೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ ಕೊಟ್ಟಲಗಿ ಗ್ರಾಮಸ್ಥರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ