ಬೃಹತ್ ಗಾತ್ರದ ಗ್ಯಾಸ್ ಟ್ಯಾಂಕರ್ ಪಲ್ಟಿ: ಮುಂದೇನಾಯ್ತು?

ಶುಕ್ರವಾರ, 23 ಆಗಸ್ಟ್ 2019 (19:53 IST)
ಬೃಹತ್ ಗಾತ್ರದ ಗ್ಯಾಸ್ ಟ್ಯಾಂಕರ್ ಒಂದು ಆಯಾ ತಪ್ಪಿ ಪಲ್ಟಿಯಾಗಿ ಭಾರೀ ಆತಂಕ ಉಂಟು ಮಾಡಿದ ಘಟನೆ ನಡೆದಿದೆ.

ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ. ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿ ನೈಸ್ ರೋಡ್ ಗೆ ಹೋಗುವ ಮಾರ್ಗದಲ್ಲಿ ಭಾರತ್ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದೆ.  ತಮಿಳುನಾಡಿನಿಂದ ಬೆಂಗಳೂರು ಕಡೆಯಿಂದ ನೈಸ್ ರೋಡ್ ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಟ್ಯಾಂಕರ್ ನಲ್ಲಿದ್ದ ಡ್ರೈವರ್ ಹಾಗು ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದು ಸಣ್ಣ ಪುಟ್ಟ ಗಾಯಗಳಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಘಟನೆ ಬಳಿಕ ಕೆಲ ನಿಮಿಷಗಳ ಕಾಲ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿತ್ತು. ಗ್ಯಾಸ್ ಟ್ಯಾಂಕರ್  ಸೋರಿಕೆಯಾಗುತ್ತದೆ ಎಂಬ ಭಯದಲ್ಲಿ ಜನರು ಆತಂಕಕ್ಕೆ  ಒಳಗಾಗಿದ್ರು.

ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್  ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಪರಿಶೀಲನೆ ನಡೆಸಿ ಯಾವುದೇ ಅನಾಹುತ ನಡೆಯದಂತೆ ಎಚ್ಚರ ವಹಿಸಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ