ಪಾಳು ಬಿದ್ದ ಬಾವಿಯಲ್ಲಿ ನವಜಾತ ಶಿಶು..!

ಶನಿವಾರ, 17 ಸೆಪ್ಟಂಬರ್ 2022 (19:47 IST)
ಮಂಡ್ಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಪಾಳು ಬಾವಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ದುಷ್ಕರ್ಮಿಗಳು ರಸ್ತೆ ಬದಿಯ 30 ಅಡಿ ಆಳದ ಪಾಳು ಬಾವಿಗೆ ಶಿಶು ಎಸೆದು ಹೋಗಿದ್ದಾರೆ. ಗ್ರಾಮದ ದಾರಿ ಹೋಕರಿಗೆ ಶಿಶು ಆಕ್ರಂದನದ ಸದ್ದು ಕಿವಿಗೆ ಬಿದ್ದಿದೆ. ಈ ವೇಳೆ ಸ್ಥಳೀಯರು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ನವಜಾತ ಶಿಶು ರಕ್ಷಣೆ ಮಾಡಿದ್ದಾರೆ. ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಕಸ ಕಡ್ಡಿಯೇ ತುಂಬಿದ್ದ ಪಾಳುಬಾವಿಯಲ್ಲಿ ಬಿದ್ದಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ನವಜಾತ ಶಿಶು ಬದುಕುಳಿದಿದೆ. ಆಗ ತಾನೇ ಜನಿಸಿರುವ ಗಂಡು ಮಗವನ್ನು ಪಾಳು ಬಾವಿಗೆ ಎಸೆದಿದ್ದು ತಾಯಿ ಕೃತ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಶಿಶುವಿನ ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಇರುವೆ ತುಂಬಿದ್ದು, ಇರುವೆ ಕಚ್ಚಿರುವ ಗುರುತುಗಳಾಗಿವೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ